ದಾವಣಗೆರೆ, ಜ.10- ಎಸ್ಸೆಸ್ಸೆಂ ನಗರದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 190ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್ ಕುಮಾರ್ ಫುಲೆ ಅವರ ಭಾವಚಿತ್ರದ ಕಾರ್ಡ್ಗಳನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಳ ಸಮುದಾಯ ಹಾಗೂ ಹೆಣ್ಣು ಮಕ್ಕಳು ಪುರುಷರಿಗೆ ಸಮಾನವಾದ ಶಿಕ್ಷಣ ಪಡೆಯಬೇಕೆಂಬ ಕನಸನ್ನು ಕಂಡು ಅದರ ಸಾಕಾರಕ್ಕಾಗಿ ಅನೇಕ ನೋವು-ಅಪಮಾನ ಸಂಕಟಗಳನ್ನು ಅನುಭವಿಸಿದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಅವರು ಸ್ಮರಿಸಿದರು.
ಆನ್ಲೈನ್ ಮೂಲಕ ಮಾತ ನಾಡಿದ ಬೆಂಗಳೂರಿನ ಚಿಂತಕ, ಬರಹಗಾರ ಮಂಗಳೂರು ವಿಜಯ್ ಫುಲೆ ದಂಪತಿಯ ಅಕ್ಷರ ಕ್ರಾಂತಿ, ಅವರ ಬದುಕಿನ ನಡೆಯನ್ನು ತಿಳಿಸಿ, ಅವರಂತೆ ನಾವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಯೂನಿಯನ್ ಅಧ್ಯಕ್ಷರಾದ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ನಿರೂಪಿಸಿದರು. ಪತ್ರಕರ್ತ ಬಾಲಕೃಷ್ಣ, ಯೂನಿಯನ್ ಪದಾಧಿಕಾರಿಗಳಾದ ಸಬ್ರೀನಾ, ನಾಜೀಮಾ ಇನ್ನಿತರರಿದ್ದರು.
ಕಾರ್ಯಕ್ರಮದಲ್ಲಿ ಡಾ. ಹೆಚ್.ಎಸ್. ಅನುಪಮ ಬರೆದ `ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಫುಲೆ’ ಪುಸ್ತಕವನ್ನು ಬೀಡಿ ಕಾರ್ಮಿಕರ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.