ಹರಿಹರ, ಜ.8- ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವ ಮೂಲಕ ಮಾದಿಗ ಸಮುದಾಯದವರಿಗೆ ನ್ಯಾಯಸಮ್ಮತ ಒಳ ಮೀಸಲಾತಿ ಕಲ್ಪಿಸಿಕೊಟ್ಟು, ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಗುರುವಾರ ನಗರದಲ್ಲಿ ಉಪ ಮುಖ್ಯಮಂತ್ರಿ ಗೋ ವಿಂದ ಕಾರಜೋಳ ಅವರಿಗೆ ಮನವಿ ನೀಡಿದರು.
ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂ ತೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 67 ವರ್ಷಗಳೇ ಗತಿಸಿದರೂ ಸಮಾಜದಲ್ಲಿ ಸಮಾನತೆ ಮೂಡಿಲ್ಲ. ಮಾದಿಗ ಸಮಾಜದವರಿಗೆ ಇಂದಿನ ಆಧುನಿಕ ಕಾಲದಲ್ಲೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂಬುದು ಕನ್ನಡಿಯಷ್ಟೇ ಸತ್ಯವಾಗಿದೆ ಎಂದರು.
ಪರಿಶಿಷ್ಟ ಜಾತಿ ಅಡಿಯಲ್ಲಿ ಸರ್ಕಾರಗಳು ನೀಡುತ್ತಿರುವ ಮೀಸಲಾತಿ ಶೋಷಿತ ಸಮುದಾಯ ದಲ್ಲಿ ಎಷ್ಟರ ಮಟ್ಟಿಗೆ ಸುಧಾರಣೆ ತಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಮಾದಿಗ ಸಮಾಜ ದವರು ಅಧಿಕ ಸಂಖ್ಯೆಯಲ್ಲಿದ್ದು, ದೊರೆಯುವ ಮೀಸಲಾತಿ ಅತ್ಯಲ್ಪವಾಗಿದೆ. ಇದು ಶೋಷಣೆಯ ಇನ್ನೊಂದು ಮುಖವಾಗಿದ್ದು, ಸಮಾನ ಅಭಿವೃದ್ಧಿಯ ದೃಷ್ಟಿಯಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಯೋಜಿಸಬೇಕೆಂಬುದು ಸಾಂವಿಧಾನಿಕ ಆಶಯವೂ ಸಹ ಆಗಿದೆ ಎಂದರು.
ಪರಿಶಿಷ್ಟ ಸಮುದಾಯದ ಮುಖಂಡರಾಗಿರುವ ಉಪ ಮುಖ್ಯಮಂತ್ರಿಗಳು ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮೂಲಕ ಶೋಷಿತ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸಲು ಶೀಘ್ರವೇ ಕಾರ್ಯ ಪ್ರವೃತ್ತರಾಗಬೇಕೆಂದು ಹೇಳಿದರು.
ಮನವಿ ಸ್ವೀಕರಿಸಿದ ಸಚಿವ ಕಾರಜೋಳ ಅವರು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುವು ದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿ. ಮಂಜಪ್ಪ ಗುಳದಹಳ್ಳಿ, ಚೌಡಪ್ಪ ಸಿ. ಭಾನುವಳ್ಳಿ, ಎಸ್.ಕೆ. ಹರೀಶ್, ಎಚ್. ನಾಗರಾಜ್, ಹನುಮಂ ತಪ್ಪ, ಬಸವರಾಜ್, ಕರಿಬಸಪ್ಪ, ಬಸವರಾಜ್, ಚಂದ್ರಪ್ಪ, ಗದಿಗೇಶ್ ಇನ್ನಿತರರಿದ್ದರು.