ಬಸಾಪುರದ ಸರ್ಕಾರಿ ಶಾಲೆಯಲ್ಲಿ ತರಬೇತಿ

ದಾವಣಗೆರೆ, ಜ.21- ಮಹಾನಗರ ಪಾಲಿಕೆಯ 21ನೇ ವಾರ್ಡ್‌ನ ಬಸಾಪುರದ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರ ತರಬೇತಿ ಕಾರ್ಯಾಗಾರವನ್ನು ಹಿರಿಯ ಸಾಹಿತಿ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ ಉದ್ಘಾಟಿಸಿದರು.

ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರು, ಶಿಕ್ಷಕರ ಕರ್ತವ್ಯಗಳು ಹಾಗೂ ಜವಾಬ್ದಾರಿಗಳ ಬಗ್ಗೆ ವಿವರಿಸಿ ದರು. ಶಾಲೆಗೆ ಸರ್ಕಾರದಿಂದ ಸೌಲಭ್ಯಗಳನ್ನು ತರುವ ಕೆಲಸ ನಾವು ಮಾಡುತ್ತೇವೆ ಎಸ್‌ಡಿಎಂಸಿ ಸದಸ್ಯರು ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಲಿ ಎಂದು ಅವರು ಸಲಹೆ ನೀಡಿದರು.

ಕೆ.ಎಲ್.ಹರೀಶ್ ಬಸಾಪುರ ಮಾತನಾಡಿ, ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಕರ ಜವಾಬ್ದಾರಿ ಎಷ್ಟು ಇದೆಯೋ, ಅದಕ್ಕಿನ್ನು ಹೆಚ್ಚಿನ ಜವಾಬ್ದಾರಿ ಪೋಷ ಕರದ್ದು ಆಗಿರುತ್ತದೆ. ಆದ್ದರಿಂದ ತಮ್ಮ ಮಕ್ಕಳ ನಡವಳಿಕೆ ಹಾಗೂ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಹೆಚ್ಚಿನ ಗಮನಹರಿ ಸಬೇಕು ಎಂದು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಲತಾ ಮಾತನಾಡಿ, ಈ ಬಾರಿಯೂ ನಮ್ಮ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ತರಲು ನಮ್ಮ ಸಿಬ್ಬಂದಿ ಪರಿಶ್ರಮಿ ಸುವ ಭರವಸೆ ನೀಡಿ ಪೋಷಕರ ಸಹಕಾರ ಕೇಳಿದರು.

ಅಧ್ಯಕ್ಷರಾದ ವಾಮದೇವಯ್ಯ, ನಾಗೇಂದ್ರಚಾರ್, ಹಿರಿಯ ಶಿಕ್ಷಕ ಸಿದ್ದಪ್ಪ ಸ್ವಾಗತಿಸಿದರು, ಇನ್ನೋರ್ವ ಶಿಕ್ಷಕ ನಾಗರಾಜ್ ನಿರೂಪಿಸಿದರು. ಶಿಕ್ಷಕ ರವೀಂದ್ರ ವಂದಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸಿದ್ದಾರ್ಥ್, ಸದಸ್ಯ ರಮೇಶ್, ಲೋಕೇಶ್ವರಯ್ಯ, ಪೋಷಕರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

error: Content is protected !!