ಹೊನ್ನಾಳಿ, ಜ.13- ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಘೋಷಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕ್ಯಾಸಿನಕೆರೆ ಕೆ.ಸಿ. ತಿಪ್ಪೇಶ್ ಒತ್ತಾಯಿಸಿದರು.
ಈ ಕುರಿತು ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿ ಅವರು ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಖರೀದಿ ಗ್ಯಾರಂಟಿ ನೀಡಬೇಕು. ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಯಾವುದೇ ಕಾರಣಕ್ಕೂ ಖರೀದಿ ಆಗಬಾರದು ಎಂದು ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೂಲಂಬಿ ಬಿ.ಬಿ. ಮುರುಗೇಶ್, ಜಿಲ್ಲಾ ಕೋಶಾಧ್ಯಕ್ಷ ಎಂ.ಕೆ. ಶಾಂತರಾಜ್, ಮುಖಂಡರಾದ ಕ್ಯಾಸಿನಕೆರೆ ಹಾಲಸ್ವಾಮಿ, ಕಮ್ಮಾರಗಟ್ಟೆ ಹರೀಶ್ ಇತರರು ಇದ್ದರು.