ದಾವಣಗೆರೆ, ಮಾ. 19- ಬೇಸಿಗೆ ಕಾಲ ಪ್ರಾರಂಭವಾಗಿ ದ್ದು, ನೀರನ್ನು ಹಿತ ಮಿತವಾಗಿ ಬಳಸುವಂತೆ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ ಅವರು ಸೂಚಿಸಿದ್ದಾರೆ.
ನಗರಕ್ಕೆ ದಿನನಿತ್ಯ ರಾಜನಹಳ್ಳಿ ಪಂಪ್ ಹೌಸ್‌ನಿಂದ 80 ಹಾಗೂ ಟಿವಿ ಸ್ಟೇಷನ್ ಮತ್ತು ಕುಂದುವಾಡ ಕೆರೆಯಿಂದ 40 ಎಂಎಲ್‌ಡಿ ನೀರನ್ನು ಪೂರೈಸಲಾಗುತ್ತಿದೆ. ಸದ್ಯ ಬೇಸಿಗೆ ಪ್ರಾರಂಭವಾಗಿದ್ದು, ಸಾರ್ವಜನಿಕರು ನೀರನ್ನು ರಸ್ತೆಗೆ ಬಿಟ್ಟು ಪೋಲು ಮಾಡುವುದು ಮತ್ತು ನೀರು ವಿತರಣಾ ಪೈಪಿಗೆ ಪಂಪ್ ಮೋಟಾರ್ ಅಳವಡಿಸುತ್ತಿರುವುದು ಕಂಡುಬಂದರೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುವುದಲ್ಲದೇ ಮೋಟಾರ್ ಜಪ್ತು ಮಾಡಲಾಗುವುದು. ಹಾಗಾಗಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಅಗತ್ಯವಿರುವಷ್ಟು ಮಾತ್ರ ನೀರನ್ನು ಸಂಗ್ರಹಿಸಿಕೊಳ್ಳಬೇಕು ಮತ್ತು ನೀರು ತುಂಬಿದ ನಂತರ ವಾಲ್ವ್ ಬಂದ್ ಮಾಡುವ ಮೂಲಕ ಪಾಲಿಕೆಯೊಂದಿಗೆ ಸಹಕರಿಸುವಂತೆ ಆಯುಕ್ತರು ಕೋರಿದ್ದಾರೆ.