ದಾವಣಗೆರೆ, ಫೆ.16- ದಾವಣಗೆರೆ ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿಗಳ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವುದನ್ನು ಎಐಡಿಎಸ್ಓ ಖಂಡಿಸಿದೆ.
ಈ ಹಿಂದೆ ಪರೀಕ್ಷಾ ಶುಲ್ಕವು 1,980 ರೂ. ಇತ್ತು, ಈ ಶುಲ್ಕವು ಪದವಿ ಪರೀಕ್ಷಾ ಶುಲ್ಕದ ಎರಡರಷ್ಟಿದ್ದು, ಪ್ರಸಕ್ತ ಸ್ನಾತಕೋತ್ತರ ಪರೀಕ್ಷೆಯ ಶುಲ್ಕವನ್ನು ಮತ್ತೆ 90 ರೂ ಏರಿಕೆ ಮಾಡಲಾಗಿದೆ. ಈ ಏರಿಕೆಯು ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ತುಂಬಾ ಹೊರೆ ಯಾಗುತ್ತದೆ. ಹಾಗಾಗಿ ಕೂಡಲೇ ಶುಲ್ಕ ಕಡಿತಗೊಳಿಸ ಬೇಕೆಂದು ಆಗ್ರಹಿಸುವುದಾಗಿ ಎಐಡಿಎಸ್ಓ ಜಿಲ್ಲಾ ಕಾರ್ಯ ದರ್ಶಿ ಟಿ. ಎಸ್. ಸುಮನ್ ತಿಳಿಸಿದ್ದಾರೆ.