ನಗರದಲ್ಲಿ ಇಂದಿನಿಂದ ಯೋಗ ಶಿಬಿರ

ದಿವ್ಯ ಯೋಗ ಮಂದಿರದ ವತಿಯಿಂದ ಶಿವರಾತ್ರಿ ಪ್ರಯುಕ್ತ ಶಿವಶಕ್ತಿ ಸಾಧನಾ ಯೋಗ ಶಿಬಿರವು ಉಚಿತವಾಗಿ ನಡೆಯಲಿದೆ ಎಂದು ಯೋಗ ಮಂದಿರದ ಸಂಸ್ಥಾಪಕ ಅಶೋಕ್ ಗುರೂಜಿ ತಿಳಿಸಿದ್ದಾರೆ.

ಇಂದಿನಿಂದ ಇದೇ ದಿನಾಂಕ ಫೆ. 25ರವರೆಗೆ ಪ್ರಾಣಾಯಾಮ, ಚಕ್ರಧ್ಯಾನ, ಮುದ್ರೆ, ತ್ರಾಟಕದ್ಯಾನ, ಶಿವಶಕ್ತಿ ಕುಂಡಲಿನಿ ಧ್ಯಾನ ಕಾಸ್ಮಿಕ ಹೀಲಿಂಗ್ ವಿಧಾನಗಳನ್ನು ಹೇಳಿಕೊಡಲಾಗುವುದು. 

ಆಸಕ್ತರು ಸಂಜೆ 6.30 ರಿಂದ 8ರವರೆಗೆ ನಗರದ ದಿವ್ಯ ಯೋಗ ಮಂದಿರದಲ್ಲಿ ನಡೆಯಲಿರುವ ಯೋಗ ಶಿಬಿರದಲ್ಲಿ ಭಾಗವಹಿಸಬಹುದು. ವಿವರಕ್ಕೆ ಸಂಪರ್ಕಿಸಿ 9972600713.

error: Content is protected !!