ದಾವಣಗೆರೆ, ಫೆ.16- ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಗೊಂಬೆಯಾಟ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರಿಗೆ `ಕರ್ನಾಟಕ ಸುವರ್ಣ ಕಣ್ಮಣಿ’ ಪ್ರಶಸ್ತಿ ಲಭಿಸಿದೆ.
ಯಕ್ಷಗಾನ ಕಲೆಯನ್ನು ಅರ್ಧ ಶತಮಾನದಿಂದ ದೇಶ ವಿದೇಶಗಳಲ್ಲಿ ವೈಭವೀಕರಿಸಿದ ಮಹತ್ತರ ಸಾಧನೆ ಗುರುತಿಸಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ಯಕ್ಷರಂಗ ಯಕ್ಷಗಾನ ಸಂಸ್ಥೆ ಪ್ರಶಸ್ತಿ ನೀಡಿದೆ. ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರುವಿನ ಯಕ್ಷಗಾನ ಅಕಾಡೆಮಿಯಲ್ಲಿ ಯಕ್ಷರಂಗದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.