ಚಿತ್ರದುರ್ಗ : ನಾಳೆ ಹರ್ಡೇಕರ್ ಮಂಜಪ್ಪನವರ ಜಯಂತಿ

ಚಿತ್ರದುರ್ಗ, ಫೆ.16- ನಗರದ ಶ್ರೀ ಜಗದ್ಗುರು ಮುರುಘ ರಾಜೇಂದ್ರ  ಬೃಹನ್ಮಠದ ವತಿಯಿಂದ ನಾಡಿದ್ದು ದಿನಾಂಕ 18ರ ಮಂಗಳವಾರ ಬೆಳಗ್ಗೆ 8.30 ಗಂಟೆಗೆ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾಗಿದ್ದ ಹಾಗೂ ಪ್ರಪ್ರಥಮವಾಗಿ ಬಸವ ಜಯಂತಿಯನ್ನು ಆರಂಭಿಸಿದ ಕೀರ್ತಿಗೆ ಪಾತ್ರರಾದ ಹರ್ಡೇಕರ್ ಮಂಜಪ್ಪನವರ ಜಯಂತಿಯನ್ನು ಶ್ರೀಮಠದ ಮುರುಗಿಯ ಶಾಂತವೀರ ಮುರುಘ ರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ಏರ್ಪಡಿಸಲಾಗಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ. ಸಿ. ಕಳಸದ್  ವಹಿಸಲಿದ್ದು, ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ನಿರ್ವಹಣೆಯಲ್ಲಿ ಸಮಾರಂಭ ಜರುಗಲಿದೆ.

error: Content is protected !!