ದಾವಣಗೆರೆ, ಫೆ.16- ಭೋಳಚಟ್ಟಿ ಚೌಡೇಶ್ವರಿ ದೇವಿ ಹಾಗೂ ಕಾಲಭೈರವ ಭೂತಪ್ಪ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯಿಂದ ನಾಡಿದ್ದು ದಿನಾಂಕ 18ರ ಬೆಳಗ್ಗೆ 7.30ಕ್ಕೆ ನಗರದ ವೀರಶೈವ ರುದ್ರಭೂಮಿ ಮುಂಭಾಗದ ಚೌಡೇಶ್ವರಿ ದೇವಿ ಮತ್ತು ಕಾಲಭೈರವ ಭೂತಪ್ಪ ಸ್ವಾಮಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ.
ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು, ನಿಚ್ಚವ್ವನಹಳ್ಳಿ ಬೃಹನ್ಮಠದ ಶಿವಯೋಗಿ ಹಾಲಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.