ದಾವಣಗೆರೆ, ಫೆ.16- ಕರ್ನಾಟಕ ಸ್ಟೇಟ್ ಪೊಲೀಸ್ ವೆಲ್‍ಫೇರ್ ಅಂಡ್ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪಬ್ಲಿಕ್ ಶಾಲೆಯ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ.
ಶಾಲೆಯು ಸಿಬಿಎಸ್‍ಇ (ಕೇಂದ್ರೀಯ) ಪಠ್ಯಕ್ರಮಕ್ಕೆ ಹೊಂದಿಕೊಂಡಂತೆ ಸಿಬಿಎಸ್‍ಸಿ ಮಾನ್ಯತೆಯನ್ನು ಪಡೆದಿದೆ.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಪಠ್ಯಕ್ರಮದೊಂದಿಗೆ ಚಟುವಟಿಕೆಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.
ಮುಂದಿನ ಸಾಲಿನ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತಿಯುಳ್ಳ ಪೋಷಕರು ಶಾಲೆಯ ವೆಬ್‍ಸೈಟ್‍ನಲ್ಲಿ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಶಾಲೆಯ ಪ್ರವೇಶಕ್ಕೆ ಪರೀಕ್ಷೆಯನ್ನು ಇದೇ ದಿನಾಂಕ 22 ಮತ್ತು 23 ರಂದು ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ppsdavanagere.karnataka.gov.in ವೆಬ್‍ಸೈಟ್ ಹಾಗೂ ದೂ.ಸಂ: 9164633833, 8277981961 ಸಂಪರ್ಕಿಸಲು ಶಾಲೆಯ ಕಾರ್ಯದರ್ಶಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.