ಬಿಎಸ್ಸೆನ್ನೆಲ್ 4ಜಿ ಸಿಮ್ ಅಪ್‍ಗ್ರೇಡ್

ದಾವಣಗೆರೆ, ಫೆ.16- ಬಿಎಸ್ಸೆನ್ನೆಲ್ ತನ್ನ ನೆಟ್‍ವರ್ಕ್‌ ಅನ್ನು 4ಜಿ ಗೆ ಅಪ್ ಗ್ರೇಡ್ ಮಾಡಲಾಗಿದೆ. ವೇಗವಾದ ಇಂಟರ್‍ನೆಟ್ ಸುಧಾರಿತ ಸಂಪರ್ಕ ಮತ್ತು ಹೆಚ್ಚು ವಿಶ್ವಾಸಾರ್ಹ ಸೇವೆಯನ್ನು ಒದಗಿಸಲಾಗುತ್ತದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ಸಂಪರ್ಕವನ್ನು ಅನುಭವಿಸಬಹುದು. 4ಜಿ ವೇಗದ ಅನುಭವಕ್ಕಾಗಿ ಎಲ್ಲಾ ಬಿಎಸ್ಸೆನ್ನೆಲ್ ಗ್ರಾಹಕರು ನಿಮ್ಮ ಆಸ್ತಿತ್ವದಲ್ಲಿರುವ 2ಜಿ, 3ಜಿ ಸಿಮ್‍ನ್ನು 4ಜಿ ಸಿಮ್‍ಗೆ ಯಾವುದೇ ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಅಥವಾ ರಿಟೇಲರ್‍ಗಳ ಅಂಗಡಿಯ ಬಳಿ ಉಚಿತವಾಗಿ ಅಪ್‍ಗ್ರೇಡ್ ಮಾಡಿ ಎಂದು ಡಿಜಿಎಂ ತಿಳಿಸಿದ್ದಾರೆ.

error: Content is protected !!