ದಾವಣಗೆರೆ, ಡಿ. 27- ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರ ಹಾಗೂ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ 30ರ ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ, ಮಧ್ಯಾಹ್ನ ಅಲಂಕಾರ ಪೂಜೆ ನಡೆಯುವುದು. ನಂತರ ದಾಸೋಹ ಏರ್ಪಡಿಸಲಾಗಿದೆ. ಹರಿಹರ ಟಿ. ಜಯದೇವಪ್ಪ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಇವರು ದಾಸೋಹ ಸೇವೆ ಏರ್ಪಡಿಸಿದ್ದಾರೆ.
February 5, 2025