ಕನ್ನಡ ಜೀವಂತಿಕೆಯ ಭಾಷೆ-ಎ.ಆರ್.ಜಿ ಕಾಲೇಜಿನ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಪ್ರೊ. ಬಾತಿ ಬಸವರಾಜ

ದಾವಣಗೆರೆ, ಡಿ. 27 – ಕನ್ನಡ ಭಾಷೆಯು ಮಾನವ ಈ ಭೂಮಿಯಲ್ಲಿ ಎಂದು ಜನಿಸಿದೆನೋ ಅಂದಿನಿಂದ ಈ ಭಾಷೆಗೆ ಇತಿಹಾಸವಿದೆ. ಭಾಷೆ ಬೆಳೆಯಬೇಕು. ಭಾಷೆ ಬೆಳೆದರೆ ಮಾನವ ಸಮುದಾಯ ಬೆಳೆಯಲು ಸಾಧ್ಯ. ಪ್ರತಿಯೊಬ್ಬರೂ ಸಹ ಇತರೆ ಭಾಷೆಗಳನ್ನು ಕಲಿತುಕೊಂಡರೆ ವ್ಯವಹಾರಿಕತೆಯನ್ನು ನಡೆಸಲು ಅನುಕೂಲವಾಗುತ್ತದೆ ಎಂದು ದವನ್ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪ್ರೊ. ಬಾತಿ ಬಸವರಾಜ್ ಹೇಳಿದರು.

ನಗರದ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಕನ್ನಡ ಸಾಹಿತ್ಯ ವೇದಿಕೆ, ಸಾಂಸ್ಕೃತಿಕ ವೇದಿಕೆ, ಐಕ್ಯೂಎಸಿ ಹಮ್ಮಿಕೊಂಡಿದ್ದ `ಎಆರ್‌ಜಿ ಕನ್ನಡ ಹಬ್ಬ’ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿಯ ಭಾಗವಾಗಿರುವುದರಿಂದ ಕಾಲಕಾಲಕ್ಕೆ ತಕ್ಕಂತೆ ಭಾಷೆಯ ಬಳಕೆ ಮಾಡಿಕೊಂಡಾಗ ಮಾತ್ರ ಕನ್ನಡದ ಅಸ್ತಿತ್ವ ಉಳಿಯುತ್ತದೆ. ಕನ್ನಡ ನುಡಿಯ ಸೊಬಗು ಅತ್ಯಂತ ಶ್ರೀಮಂತವಾದುದ್ದು, ಇಲ್ಲಿನ ನೆಲ, ಜಲ, ಜನರ ಬದುಕು ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನು ಒಳಗೊಂಡಿದೆ. ಕನ್ನಡ ಭಾಷೆ ಇಂದು ವಿಶ್ವತ್ಮಾಕವಾಗಿ ಬೆಳೆದಿದೆ ಎಂದರು.

ಕನ್ನಡಿಗರು ಜಗತ್ತಿನಾದ್ಯಂತ ಉನ್ನತ ಸ್ಥಾನವನ್ನು ಪಡೆದಿರುವುದು ಕನ್ನಡ ಭಾಷೆಯಿಂದ ಮಾತ್ರ. ಹಾಗಾಗಿ ಕನ್ನಡ ಜೀವಂತಿಕೆಯ ಭಾಷೆಯಾಗಿದೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಹೆಚ್. ಮುರುಗೇಂದ್ರಪ್ಪ ಮಾತನಾಡಿ, ಕನ್ನಡ ನಾಡು, ನುಡಿಯನ್ನು ಪ್ರತಿಯೊಬ್ಬರೂ ಬೆಳೆಸುವುದು ಆದ್ಯ ಕರ್ತವ್ಯ. ಅತ್ಯಂತ ಸೊಬಗು  ಶ್ರೀಮಂತಿಕೆಯ ನಾಡು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ.ಬಿ. ಬೋರಯ್ಯ ಅವರು, ಕನ್ನಡವನ್ನು ಹೆಚ್ಚು ಹೆಚ್ಚು ಮಾತನಾಡುವುದರಿಂದ ಕನ್ನಡ ಉಳಿಯುತ್ತದೆ ಎಂದು ಹೇಳಿದರು.

ಪ್ರಾಚಾರ್ಯ ಬೊಮ್ಮಣ್ಣ ಅವರು ಕನ್ನಡ ರಾಜ್ಯೋತ್ಸವಕ್ಕಿಂತ ಕರ್ನಾಟಕ ರಾಜ್ಯೋತ್ಸವ ಆಚರಿಸುವುದು ಮುಖ್ಯ ಎಂದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಅನಿತಾ ಕುಮಾರಿ, ಎಆರ್‌ಜಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಬಿ. ನಾಗರಾಜ್, ಐಕ್ಯೂಎಸಿ ಸಂಚಾಲಕಿ ಪ್ರೊ. ರಶ್ಮಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಆನಂದ್, ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ. ಚಮನ್ ಸಾಬ್,ಅಧೀಕ್ಷಕ ಕರಿಬಸಪ್ಪ, ಉಪನ್ಯಾಸಕರಾದ ಕವಿತಾ ಪಾಟೀಲ್, ಸಲ್ಮಾ,  ಸೌಮ್ಯ ಆಚಾರ್, ಮೌಸಿನಾ ಕೌಸರ್, ಬೇಬಿ ಅಮೀನಾ, ರೇಖಾ, ಕೆ.ಟಿ. ಸ್ವಪ್ನಾ, ಗಾಯತ್ರಿ, ರೇಖಾ ಉಪಸ್ಥಿತರಿದ್ದರು.

ಅಜೇಯ್ ಪಾಟೀಲ್ ಸ್ವಾಗತಿಸಿದರು. ಡಾ.ಹೆಚ್.ಆರ್. ತಿಪ್ಪೇಸ್ವಾಮಿ ವಂದಿಸಿ, ಆರ್.ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. 

error: Content is protected !!