ಮಲೇಬೆನ್ನೂರು ಸಮೀಪದ ಹಾಲಿವಾಣ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಮರಿಬನ್ನಿ ಅಂಗವಾಗಿ 8 ರಿಂದ 9 ಗಂಟೆಯವರೆಗೆ ಕಾಯಿತೂಕ, ಜವಳ ಇತ್ಯಾದಿ ಸೇವಾ ಕಾರ್ಯಕ್ರಮಗಳು ನಡೆಯಲಿದ್ದು, 12 ಗಂಟೆಗೆ ಸ್ವಾಮಿಗೆ ದೊಡ್ಡ ಎಡೆ ಪೂಜೆ, 12.20ಕ್ಕೆ ಸಾಮೂಹಿಕ ವಿವಾಹಗಳು ಜರುಗಲಿವೆ.
ಬಳಿಕ ಹಮ್ಮಿಕೊಂಡಿರುವ ಧರ್ಮಸಭೆಯಲ್ಲಿ ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಯಾದವ ಗುರುಪೀಠದ ಶ್ರೀ ಯಾದವಾನಂದ ಸ್ವಾಮೀಜಿ, ರಟ್ಟಿಹಳ್ಳಿಯ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಹದಡಿ ಮಠದ ಶ್ರೀ ಸದ್ಗುರು ಮುರುಳೀಧರ ಸ್ವಾಮೀಜಿ, ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ. ಶಾಂತಜೀ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಎಸ್.ಜಿ. ಪರಮೇಶ್ವರಪ್ಪ ತಿಳಿಸಿದ್ದಾರೆ.
ಅಧ್ಯಕ್ಷತೆ ಎಸ್.ಜಿ. ಬಸವರಾಜಪ್ಪ, ಉದ್ಘಾ ಟನೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮುಖ್ಯ ಅತಿಥಿ ಗಳಾಗಿ ಬಿ.ಪಿ. ಹರೀಶ್, ಎಸ್.ರಾಮಪ್ಪ, ಹೆಚ್.ಎಸ್. ಶಿವಶಂಕರ್, ನಂದಿಗಾವಿ ಶ್ರೀನಿವಾಸ್, ಡಾ. ರಶ್ಮಿ ವೈ. ನಾಗಪ್ಪ, ಎಂ. ನಾಗೇಂದ್ರಪ್ಪ, ಜಿ.ಬಿ. ವಿನಯ್‌ಕುಮಾರ್, ಚಂದ್ರಶೇಖರ್ ಪೂಜಾರ್, ಬೆಣ್ಣೆಹಳ್ಳಿ ಹಾಲೇಶಪ್ಪ, ಬಿ.ಎಂ. ವಾಗೀಶ್ ಸ್ವಾಮಿ ಮತ್ತಿತರರು ಉಪಸ್ಥಿತರಿರುವರು.