ಜಗಳೂರು : ಅಮಿತ್ ಷಾ ಹೇಳಿಕೆ‌ ಖಂಡಿಸಿ ವಕೀಲ ಸಂಘದ ಮನವಿ

ಜಗಳೂರು : ಅಮಿತ್ ಷಾ ಹೇಳಿಕೆ‌  ಖಂಡಿಸಿ ವಕೀಲ ಸಂಘದ ಮನವಿ

ಜಗಳೂರು, ಡಿ. 26 – ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಸಚಿವ ಅಮಿತ್ ಷಾ ನೀಡಿರುವ ಅವಹೇಳನಾಕಾರಿ ಹೇಳಿಕೆ ಖಂಡಿಸಿ ತಾಲೂಕು ವಕೀಲರ ಸಂಘದಿಂದ  ತಹಶೀಲ್ದಾರ್ ಮುಖಾಂತರ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಕೀಲ ಟಿ.ಬಸವರಾಜ್ ಮಾತನಾಡಿ, ದೇಶದಲ್ಲಿ ಎಲ್ಲಾ ವರ್ಗಗಳಿಗೆ ಸಮಾನತೆ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ಸ್ಮರಿಸುವುದರಲ್ಲಿ ತಪ್ಪೇನಿಲ್ಲ. ಬಹುಸಂಸ್ಕೃತಿ ನೆಲೆಸಿದ ದೇಶದಲ್ಲಿ ಹಲವು ಧರ್ಮಗಳು ಅವರವರ ನಂಬಿಕೆ. ಮನುವಾದವನ್ನು ಬಲವಂತವಾಗಿ ಬಿತ್ತುವುದು ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟುಮಾಡಿದಂತಾಗಿದೆ. ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ಪರಶುರಾಮ್, ಆರ್.  ಓಬಳೇಶ್, ಶ್ರೀನಿವಾಸ್, ಸಿ.ಬಸವರಾಜ್, ಪಂಪಣ್ಣ, ಎಚ್.ಬಸವರಾಜಪ್ಪ, ನಾಗೇಶ್, ತಿಪ್ಪೇಸ್ವಾಮಿ, ಕುಂಬಾರ್, ಕೆ.ವಿ. ರುದ್ರೇಶ್, ಹಾಲಪ್ಪ, ಬಾಲಪ್ಪ, ರಂಗಪ್ಪ, ವೀರೇಶ್, ಮಹಾಂತೇಶ್, ಗೋಗುದ್ದು ತಿಪ್ಪೇಸ್ವಾಮಿ ಇದ್ದರು.

error: Content is protected !!