ದಾವಣಗೆರೆ, ಡಿ. 26 – ದೇಶದ ಮಾಜಿ ಪ್ರಧಾನಿ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಡಾ. ಮನಮೋಹನ್ ಸಿಂಗ್ ನಿಧನದಿಂದ ಭಾರತ ಮತ್ತು ಇಡೀ ವಿಶ್ವಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ ಎಂದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಭಾರತದ ಹದಿನಾಲ್ಕನೇ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನಸಿಂಗ್ ಅವರು ಚಿಂತಕರು, ವಿದ್ವಾಂಸರು ಹಾಗೂ ನಿಗರ್ವಿಗಳು ಆಗಿದ್ದರು. ಇವರು ತಮ್ಮ ಶೈಕ್ಷಣಿಕ ಮತ್ತು ಕರ್ತವ್ಯ ಎರಡರಲ್ಲೂ ಶ್ರದ್ಧೆ ಹಾಗೂ ವಿನೀತ ಭಾವನೆಯಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.
ಡಾ. ಮನಮೋಹನ್ ಸಿಂಗ್ ಅವರು ಆರ್ಥಿಕತೆಯನ್ನು ಪರಿವರ್ತಿಸುವ ವ್ಯಾಪಕ ಸುಧಾರಣೆಗಳನ್ನು ತಂದವರು. ಯುಪಿಎಯ ಎರಡು ಅವಧಿಯ ಪ್ರಧಾನಿಯಾಗಿ ಅವರು ಸಲ್ಲಿಸಿದ್ದ ಸೇವೆಯನ್ನು ಅವರು ಕೊಂಡಾಡಿದ್ದಾರೆ.