ಬಸಾಪುರದಲ್ಲಿ ಇಂದು – ನಾಳೆ ಮಹೇಶ್ವರ ಜಾತ್ರೆ

ದಾವಣಗೆರೆ ಸಮೀಪದ ಬಸಾಪುರ ಗ್ರಾಮದಲ್ಲಿ ಇಂದು ಮತ್ತು ನಾಳೆ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ.

ಇಂದು ಬೆಳಿಗ್ಗೆ 7 ಗಂಟೆಗೆ ಮಹಾಪೂಜೆ ನಂತರ ಇಡೀ ದಿನ ಅನ್ನ ಹಾಲು, ಬಾಳೆಹಣ್ಣು, ಬೋರಾ ಸಕ್ಕರೆ ಪ್ರಸಾದ ಸೇವೆ ನಡೆಯಲಿದೆ. ನಾಳೆ ದಿನಾಂಕ 25ರ ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಇಡೀ ದಿನ ಅನ್ನ ಸಾರು ಮತ್ತು ಅನ್ನ ಮಜ್ಜಿಗೆ ಸಾರು ಪ್ರಸಾದ ಸೇವೆ ನೆರಲಿದೆ.

ಭಕ್ತಾದಿಗಳು ಈ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ತನು- ಮನ-ಧನ ಅರ್ಪಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮುಖ್ಯ ಟ್ರಸ್ಟಿಗಳಾದ ಯು.ಎಂ. ಸ್ವರೂಪಾನಂದ, ಸಿದ್ಧರಾಮೇಶ್ವರ ಆಲದಹಳ್ಳಿ ಕೋರಿದ್ದಾರೆ.

error: Content is protected !!