ವೃದ್ಧೆ ಮೇಲೆ ಆತ್ಯಾಚಾರ : ಅಪರಾಧಿಗೆ 10 ವರ್ಷ ಶಿಕ್ಷೆ, ದಂಡ

ದಾವಣಗೆರೆ, ಡಿ.23- 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯವು 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಹೊನ್ನಾಳಿ ತಾಲ್ಲೂಕಿನ ಬೀರಗೊಂಡನಹಳ್ಳಿ ಗ್ರಾಮದ ರವಿ (30) ಶಿಕ್ಷೆಗೆ ಒಳಗಾದ ವ್ಯಕ್ತಿ. 2022ರ ಡಿ.3ರ ಬೆಳಗಿನ ಜಾವ 4ಗಂಟೆಗೆ ವೃದ್ಧೆ ಮನೆಯಲ್ಲಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಮನೆ ಪ್ರವೇಶಿಸಿ ಅತ್ಯಾಚಾರವೆಸಗಿದ್ದ.

ಹೊನ್ನಾಳಿ ಠಾಣೆಯ ಪೊಲೀಸ್‌ ನಿರೀಕ್ಷಕ ಹೆಚ್‌.ಎಂ. ಸಿದ್ದೇಗೌಡ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿಯ ಮೇಲಿನ ಆಪಾದನೆ ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಅಪರಾಧಿಗೆ ಶಿಕ್ಷೆ ನೀಡಿದ್ದಾರೆ. ಪಿರ್ಯಾದಿ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್‌ ನ್ಯಾಯ ಮಂಡಿಸಿದ್ದಾರೆ.

error: Content is protected !!