ದಾವಣಗೆರೆ, ನ. 10- ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಪ್ರಮುಖ ಗುರಿಗಳಾದ ಮನೆ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಪ್ಲಾಸ್ಟಿಕ್ ನಿಷೇಧ, ನಗರ ಸೌಂದರ್ಯ ಹಾಗೂ ವೈಜ್ಞಾನಿಕ ವಿಲೇವಾರಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಮಹಾನಗರ ಪಾಲಿಕೆಯು ಪ್ರಗತಿ ಸಾಧಿಸಿರುತ್ತದೆ. ಇದರ ಪ್ರಮಾಣೀಕರಣಕ್ಕೆ ಅವಶ್ಯವಿರುವ ಎಲ್ಲಾ ಮಾನದಂಡಗಳನ್ನು ಅನುಸರಿಸಿರುತ್ತದೆ. ಆದ್ದರಿಂದ ನಗರವನ್ನು ಕಸ ಮುಕ್ತ ನಗರ ಸ್ಟಾರ್ ರೇಟಿಂಗ್ 3 ಎಂದು ಘೋಷಿಸಲಾಗುವುದು. ಇದಕ್ಕೆ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆ ಗಳಿಂದ ಸಲಹೆ, ಆಕ್ಷೇಪಣೆಗಳು ಇದ್ದಲ್ಲಿ ಮಹಾನಗರ ಪಾಲಿಕೆ ಆರೋಗ್ಯ ಶಾಖೆ ಕಚೇರಿಗೆ ಲಿಖಿತ ರೂಪದಲ್ಲಿ ಇದೇ ದಿನಾಂಕ 15 ರೊಳಗಾಗಿ ಸಲ್ಲಿಸುವಂತೆ ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.
December 22, 2024