ಜಿಎಂಐಟಿಯಲ್ಲಿ ಇಂದು ಕಾರ್ಯಾಗಾರ

ದಾವಣಗೆರೆ, ನ. 10-  ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಇನ್‌ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ಅಟಲ್ ಪ್ರಾಯೋಜಿತ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್ ನಾಳೆ ದಿನಾಂಕ
11 ರಿಂದ 16 ರವರೆಗೆ ನಡೆಯಲಿದೆ ಎಂದು ಜಿ.ಎಂ. ವಿವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರೂ, ಎಫ್‌ಡಿಪಿ ಸಂಚಾಲಕ ಡಾ. ವೀರಗಂಗಾಧರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್ ಶೀರ್ಷಿಕೆಯು `ಬಿಲ್ಡಿಂಗ್ ಎ ಕಲ್ಚರ್‌ ಆಫ್ ಸೈಬರ್ ಸೆಕ್ಯೂರಿಟಿ – ಟ್ರೈನ್‌ ಯುವರ್ ಎಂಪ್ಲಾಯೀಸ್ ಟು ಬಿ ಸೇಫ್ ಆನ್ ಲೈನ್’ ಎಂಬುದಾಗಿ ಇದೆ ಎಂದರು. ನಾಳೆ ಸೋಮವಾರ ಬೆಳಿಗ್ಗೆ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಚಿಕ್ಕಬಳ್ಳಾಪುರ ಎಸ್‌ಜೆಸಿ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಟಿ. ರಾಜು ಆಗಮಿಸಲಿದ್ದಾರೆ ಎಂದು  ಎಫ್‌ಡಿಪಿ ಸಂಯೋಜಕರಾದ ಪ್ರೊ. ಸೌಮ್ಯ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟಿಮನಿ ಉಪಸ್ಥಿತರಿದ್ದರು.

error: Content is protected !!