ನಗರದ 17 ಸ್ಥಳಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ, ವಿವಿಧ ಕಾರ್ಯಕ್ರಮಗಳು

ದಾವಣಗೆರೆ, ಜ. 9- ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲಪಿಸುವ ಉದ್ದೇಶದಿಂದ ನ. 17 ರಿಂದ ದೇಶಾದ್ಯಂತ ಪ್ರಾರಂಭವಾಗಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಇಂದಿನಿಂದ ನಗರ ವ್ಯಾಪ್ತಿಯಲ್ಲಿನಗರದ 17 ಸ್ಥಳಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ, ವಿವಿಧ ಕಾರ್ಯಕ್ರಮಗಳು - Janathavani ಆರಂಭಗೊಂಡಿದೆ.

ಪಾಲಿಕೆ ವ್ಯಾಪ್ತಿಯ ಸುಮಾರು 17 ಸ್ಥಳಗ ಳಲ್ಲಿ ಸಂಕಲ್ಪ ಯಾತ್ರೆ ಡಿಜಿಟಲ್ ವಾಹನ ಸಾರ್ವ ಜನಿಕರಿಗೆ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಿದೆ. ಅಲ್ಲದೇ ಯಾತ್ರೆ ನಡೆಯುವ ಈ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾ ಸಣೆ, ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಇಲ್ಲದವರಿಗೆ ಅನಿಲ ಸಂಪರ್ಕ, ಆಯುಷ್ಮಾನ್ ಆರೋಗ್ಯ ವಿಮೆ ಇಲ್ಲದವರಿಗೆ ಆಯುಷ್ಮಾನ್ ಕಾರ್ಡ್ ನೀಡುವ ಚಟುವಟಿಕೆಯನ್ನೂ ಹಮ್ಮಿಕೊಳ್ಳ ಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ವಿನಂತಿ ಮಾಡಿದ್ದಾರೆ.

ನಗರದ ಡಿಸಿಎಂ ಲೇಔಟ್, ನಿಟುವಳ್ಳಿ, ವಿದ್ಯಾರ್ಥಿ ಭವನ, ಎವಿಕೆ ಕಾಲೇಜು ರಸ್ತೆ, ರಾಂ ಅಂಡ್ ಕೋ ವೃತ್ತ, ಜಯದೇವ ವೃತ್ತ, ಕೆ.ಆರ್. ಮಾರ್ಕೆಟ್ ಸರ್ಕಲ್, ಮಂಡಿಪೇಟೆ, ವಿಜಯ ಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆ, ಎಸ್‌ಪಿಎಸ್ ನಗರ, ಎಸ್.ಎಂ. ಕೃಷ್ಣ ನಗರ, ವಿನೋಬನಗರ, ಶಾಮನೂರು, ಆಂಜನೇಯ ಬಡಾವಣೆ ಸೇರಿದಂತೆ ಹರಿಹರ ನಗರ, ಮಲೇಬೆನ್ನೂರು, ಚನ್ನಗಿರಿ ಸೇರಿದಂತೆ ಹಲವೆಡೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.

error: Content is protected !!