ದಾವಣಗೆರೆ, ಜ. 9- ಶಾಮನೂರಿನ ಶ್ರೀಮತಿ ಶ್ರೀದೇವಿ ತಿಮ್ಮಾರೆಡ್ಡಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವತಿಯಿಂದ ನಾಳೆ ದಿನಾಂಕ 10ರ ಬುಧವಾರ ಆಂಜನೇಯ ದೇವಸ್ಥಾನದ ಬಳಿಯ ಶ್ರೀರಾಮನ ದೇವ ಸ್ಥಾನದಲ್ಲಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಮಹಾಂತೇಶ ಆರ್.ಕಮ್ಮಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಬೆಳಿಗ್ಗೆ 7 ಗಂಟೆಗೆ ಪೂಜೆ, ಪಾನಕ, ಕೋಸಂಬರಿ ಪ್ರಸಾದ ವ್ಯವಸ್ಥೆ ಇದೆ. 10 ಗಂಟೆಗೆ ಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಂದ ಶ್ರೀರಾಮ ಭಕ್ತಿ ಗೀತೆ ನೃತ್ಯ, ಶ್ರೀರಾಮನ ಕುರಿತ ವಂಶಾವಳಿಯ ಪಠಣ ಮುಂತಾದ ಕಾರ್ಯಕ್ರಮಗಳಿವೆ.
ಸ್ಕಾಲರ್ ಶಿಪ್: ಡಾ.ತಿಮ್ಮಾರೆಡ್ಡಿ ಬಾಲ ಕರ ಪದವಿ ಪೂರ್ವ ಕಾಲೇಜಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ ಶಿಪ್ ಪರೀಕ್ಷೆಯನ್ನು ಇದೇ 21 ಹಾಗೂ 28ರಂದು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಆಂಜನಾದ್ರಿ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ತಿಮ್ಮಾರೆಡ್ಡಿ ಉಪಸ್ಥಿತರಿದ್ದರು.