ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ನಲ್ಲಿರುವ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಧನುರ್ಮಾಸದ ಪೂಜೆ ನಡೆಯುತ್ತಿದ್ದು, ಬರುವ ಜನವರಿ 15 ರವರೆಗೆ ನಡೆಯಲಿದೆ.
ಇಂದು ಶ್ರೀ ಸಂಕಷ್ಟಹರ ಚತುರ್ಥಿ, ರಾತ್ರಿ 7.30 ಕ್ಕೆ ಶ್ರೀ ಮಹಾಗಣಪತಿ ಪೂಜೆ, ಗಣಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯುವುದು. ರಾತ್ರಿ 9.06 ಗಂಟೆಗೆ ಚಂದ್ರದರ್ಶನ ನಡೆಯುವುದು.
ದಿನಾಂಕ ಜನವರಿ 11 ರ ಗುರುವಾರ ಎಳ್ಳು ಅಮಾವಾಸ್ಯೆ ಪ್ರಯುಕ್ತ ಶ್ರೀ ನಾಗಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ. ದಿನಾಂಕ ಫೆಬ್ರವರಿ 16 ರಂದು 26ನೇ ವಾರ್ಷಿಕೋತ್ಸವ ಮತ್ತು ರಥೋತ್ಸವ ನಡೆಯುವುದು.