ಕೆಎಸ್ಸಾರ್ಟಿಸಿ ನಮ್ಮ ಕಾರ್ಗೋ ಟ್ರಕ್ ಸೇವೆ ಆರಂಭ

ದಾವಣಗೆರೆ, ಡಿ. 29 – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸರಕು ಸಾಗಾಟ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮ ಕಾರ್ಗೋ ಟ್ರಕ್ ಸೇವೆಯನ್ನು ಪ್ರಾರಂಭಿಸಲಾಗಿದೆ.

ಸಾರಿಗೆ ನಿಗಮವು ಸರಕು ಸಾಗಾಟ ಮಾಡಲು 1 ರಿಂದ 100 ಕಿ.ಮೀ ಕಾರ್ಯ ಚರಣೆಗೆ ಪ್ರತಿ ಕಿ.ಮೀ ಗೆ 50 ರೂ, 200 ಕಿ.ಮೀ ಕಾರ್ಯಾಚರಣೆಗೆ  ಪ್ರತಿ ಕಿ.ಮೀ ಗೆ 40ರೂ ಹಾಗೂ 200 ಕಿ.ಮೀ ಮೇಲ್ಪಟ್ಟ ಕಾರ್ಯಚರಣೆಗೆ  ಪ್ರತಿ ಕಿ.ಮೀಗೆ ರೂ 35 ನಿಗದಿ ಪಡಿಸಲಾಗಿದೆ.

ರಿಯಾಯಿತಿ ಸೌಲಭ್ಯ: ಟ್ರಕ್ ಮೂಲಕ ಸರಕು ಸಾಗಾಣೆ ಸೌಲಭ್ಯ ಪಡೆಯುವ ಗ್ರಾಹಕ ಹಾಗೂ ಸಂಸ್ಥೆಗಳು ಹೋಗುವ ಮತ್ತು ಬರುವ ಎರಡು ಮಾರ್ಗದ ಸರಕು ಸಾಗಾಣೆಗಾಗಿ ಬುಕ್ಕಿಂಗ್ ಮಾಡಿದಲ್ಲಿ ಅಥವಾ ಖಚಿತವಾದ ವ್ಯವಹಾರ ನೀಡಿದಲ್ಲಿ ಅಂತವರ ಜೊತೆಯಲ್ಲಿ ಸೂಕ್ತ ಒಡಂಬಡಿಕೆ ಮಾಡಿಕೊಳ್ಳಲಾಗುವುದು.

ಟ್ರಕ್ ಬುಕ್ಕಿಂಗ್ ಮಾಡಲು ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಂಚಾರಿ ಅಧಿಕಾರಿ ದೂ. 77609 90452, ವಿಭಾಗೀಯ ತಾಂತ್ರಿಕ ಅಭಿಯಂತರ ದೂ. 77609 90451, ಘಟಕ ವ್ಯವಸ್ಥಾಪಕರ
ದೂ. 77609 90463ಗೆ ಸಂಪರ್ಕಿಸಬಹುದು.

error: Content is protected !!