ದಾವಣಗೆರೆ, ಡಿ. 26- ಶಾಂತಿ ಸಾಗರ (ಸೂಳೆಕೆರೆ)ದಲ್ಲಿ 2024ರ ಬೇಸಿಗೆ ಹಂಗಾಮಿಗೆ ನೀರಾವರಿ ಬೆಳೆಗಳಿಗೆ ನೀರು ಪೂರೈಸುವಷ್ಟು ನೀರಿನ ಸಂಗ್ರಹಣೆ ಇರುವುದಿಲ್ಲ. ಕಾರಣ ಅಚ್ಚುಕಟ್ಟಿಗೆ ನೀರನ್ನು ಹರಿಸುವುದಿಲ್ಲ. ರೈತರು ಯಾವುದೇ ನೀರಾವರಿ ಬೆಳೆಗಳನ್ನು ಬೆಳೆಯಬಾರದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಂ.3 ಭದ್ರಾ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರೈತರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ಬೆಳೆದರೆ ಅದಕ್ಕೆ ಇಲಾಖೆ ಜವಾಬ್ದಾರಿ ಆಗುವುದಿಲ್ಲ ಎಂದೂ ಅವರು ಎಚ್ಚರಿಸಿದ್ದಾರೆ. ಶಾಂತಿಸಾಗರ ಕೆರೆಯ ಕಟ್ಟಡ, ಕಾಲುವೆ ಹಾಗೂ ಗೇಟ್‌ಗಳನ್ನು ಹಾನಿಗೊಳಪಡಿಸಿದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
December 28, 2024