ರಾಣೇಬೆನ್ನೂರು-ಅತಿಥಿ ಉಪನ್ಯಾಸಕರ ಮುಷ್ಕರ ಆರಂಭ

ರಾಣೇಬೆನ್ನೂರು, ಡಿ.26-  ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗೆ      ಒತ್ತಾಯಿಸಿ ಮುಷ್ಕರ ಆರಂಭಿಸಿದ್ದಾರೆ.   

ಪಿ.ಬಿ. ರೋಡಿನ ಕೆ.ಇ.ಬಿ. ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಸ್‍ನಿಲ್ದಾಣದ ಎದುರಿಗೆ ರಸ್ತೆತಡೆ ಮೂಲಕ ಪ್ರತಿಭಟನೆ ಮಾಡಿ,  ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.  

ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಜಿ. ಕುಂದಾಪುರ, ಕನ್ನಡ ಜಾಗೃತಿ ವೇದಿಕೆಯ ಮಂಜುನಾಥ ಎನ್. ದುಗ್ಗತ್ತಿ,  ಕರ್ನಾಟಕ ರಕ್ಷಣಾ ವೇದಿಕೆಯ  ಫಕ್ಕೀರೇಶ ರಂಗರಡ್ಡಿ,  ವಕೀಲರ ಸಂಘದ ತಾಲೂಕ ಅಧ್ಯಕ್ಷ  ಬುರಡಿಕಟ್ಟಿಯವರು, ಅತಿಥಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ ಬೆನ್ನೂರ, ರಾಣೇಬೆನ್ನೂರ ಕಾಲೇಜಿನ ಅಧ್ಯಕ್ಷ  ಡಾ. ಗೋವಿಂದಪ್ಪ ಜಿ,  ಉಪನ್ಯಾಸಕರುಗಳಾದ ಕೆ.ಎಂ.ಮರಡಿ ಬಣಕಾರ, ಡಾ.ಎಸ್.ಎಲ್. ಕರ್ಲವಾಡ, ಎಂ.ಐ. ಸೊನ್ನದ, ಶಿಲ್ಪಾ ಹಲಗಣ್ಣನವರ, ಶಿಲ್ಪಾ ಹಾವನೂರ, ಶ್ರೀನಿವಾಸ ನಲವಾಗಲ, ಸತೀಶ ಜ್ಯೋತಿ, ಆನಂದ ಕಡ್ಲೆಪ್ಪನವರ, ಶಿರೂರ, ಕೇಶವ ಹಳ್ಳಿಗುಡಿ, ಮಾಧುರಿ, ವಿಮಲಾಕರ, ಕವಿತಾ ಮಾದೇನಹಳ್ಳಿ, ಶ್ವೇತಾ ಜೆ, ಉಮ್ಮೇಶ ಸಾದರ ಇನ್ನೂ ಅನೇಕ ಉಪನ್ಯಾಸಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

error: Content is protected !!