ಹಾಲಿವಾಣದಲ್ಲಿ ಇಂದು ದೊಡ್ಡ ಜಾತ್ರೆ-ಸಾಮೂಹಿಕ ವಿವಾಹ ಮಹೋತ್ಸವವು ಜರುಗಲಿದೆ

ಮಲೇಬೆನ್ನೂರು ಸಮೀಪದ ಹಾಲಿವಾಣ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೊಡ್ಡ ಎಡೆ ಜಾತ್ರೆ, ಮರಿಬನ್ನಿ, ಕಾರ್ತಿಕೋತ್ಸವ ಮತ್ತು ಸಾಮೂಹಿಕ ವಿವಾಹ ಮಹೋತ್ಸವವು ಇಂದು ಜರುಗಲಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ ತಿಳಿಸಿದ್ದಾರೆ.

ಬೆಳಿಗ್ಗೆ 12 ಗಂಟೆಗೆ ದೊಡ್ಡ ಎಡೆ ಪೂಜೆ ಮತ್ತು ಮಧ್ಯಾಹ್ನ 12.21 ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿದ್ದು, ನಂತರ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಯಾದವ ಗುರುಪೀಠದ ಶ್ರೀ ಯಾದವನಂದ ಸ್ವಾಮೀಜಿ, ಕಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ರಟ್ಟಿಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹದಡಿ ಚಂದ್ರಗಿರಿಮಠದ ಶ್ರೀ ಸದ್ಗುರು ಮುರುಳೀಧರ ಸ್ವಾಮೀಜಿ, ರಾಜಯೋಗಿನಿ ಬ್ರಹ್ಮಾಕುಮಾರಿ.ಮಂಜುಳಾಜಿ, ಮಠದ ಶ್ರೀ ಶೇಖರಯ್ಯ, ಶ್ರೀ ಪೂಜಾರ್ ರೇವಣಸಿದ್ದೇಶ್ವರ ಇವರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಅಧ್ಯಕ್ಷತೆ : ಎಸ್.ಜಿ.ಬಸವರಾಜಪ್ಪಜ್ಜ, ಉದ್ಘಾಟನೆ : ನಂದಿಗಾವಿ ಶ್ರೀನಿವಾಸ್, ಮುಖ್ಯ ಅತಿಥಿಗಳು : ಬಿ.ಪಿ.ಹರೀಶ್, ಎಸ್.ರಾಮಪ್ಪ, ಹೆಚ್.ಎಸ್.ಶಿವಶಂಕರ್, ಡಾ. ರಶ್ಮಿ ವೈ.ನಾಗಪ್ಪ, ಎಂ.ನಾಗೇಂದ್ರಪ್ಪ, ಹೆಚ್.ಬಿ.ಮಂಜಪ್ಪ, ಪೂಜಾರ್ ಹಾಲೇಶಪ್ಪ, ಬಿ.ಜಿ.ವಿನಯ್‌ಕುಮಾರ್, ಶಿವಕುಮಾರ್ ಒಡೆಯರ್, ಚಂದ್ರಶೇಖರ್ ಪೂಜಾರ್, ಬೆಣ್ಣೆಹಳ್ಳಿ ಹಾಲೇಶಪ್ಪ ಹಾಗೂ ಮತ್ತಿತರರು.

error: Content is protected !!