ದಾವಣಗೆರೆ: ಗುಡ್ ಫ್ರೈಡೆಯಂದು ಏಸುಕ್ರಿಸ್ತರು ಶಿಲುಬೆಗೇರಿದ ದಿನ. ತ್ಯಾಗ ಮತ್ತು ನೋವನ್ನು ಸಂಕೇತಿಸುವ ಇದು, ಕ್ರಿಶ್ಚಿಯನ್ನರಿಗೆ ಪವಿತ್ರ ದಿನವಾಗಿದೆ. ಶುಕ್ರವಾರ ನಗರದ ಪಿ.ಜೆ ಬಡಾವಣೆಯಲ್ಲಿರುವ ಸಂತ ತೋಮಸರ ದೇವಾಲಯದಲ್ಲಿ ಗುಡ್ ಫ್ರೈಡೇ ಆಚರಿಸಲಾಯಿತು.
ಮಧ್ಯಾಹ್ನ ಯೇಸುವಿನ ಯಾತನೆಗಳ ಹಾಗೂ ಮರಣದ ಸಂಕೇತವಾಗಿ ಹೊರಾಂಗಣ ಶಿಲುಬೆಯ ಹಾದಿ, ಶಿಲುಬೆಯ ಸನ್ಮಾನ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ಫಾದರ್ ಅಂಥೋನಿ ನಝರೆತ್ ಹಾಗೂ ಫಾದರ್ ವಿನೋದ್ ಅವರು ಪೂಜಾ ವಿಧಿಗಳನ್ನು ನೆರವೇರಿಸಿದರು.