ಶಾಸಕರ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ

ಶಾಸಕರ ವಿರುದ್ಧ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಆಗ್ರಹ

ಭ್ರಷ್ಟಾಚಾರ ಪ್ರಕರಣ ಸಿಐಡಿಗೆ ವಹಿಸಲು ಆಗ್ರಹಿಸಿ ಕಾರ್ಯಕರ್ತರ ಪ್ರತಿಭಟನೆ

ದಾವಣಗೆರೆ, ಮಾ. 3- ಕೋಟಿ ಲಂಚ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಸೇರಿದಂತೆ ಬಿಜೆಪಿಯ ಎಲ್ಲಾ ಸಚಿವರು, ಶಾಸಕರು ಮಾಡಿರುವ ಅಕ್ರಮಗಳ ವಿರುದ್ಧ ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಜಯದೇವ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಇದೇ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಶಿವ ಕುಮಾರ್ ಮಾತನಾಡಿ, ಬಿಜೆಪಿಯ ದುರಾಡಳಿತವನ್ನು ಕಾಂಗ್ರೆಸ್ ವರಿ ಷ್ಠರು ಸಾಕ್ಷಿ ಸಮೇತ ಹೇಳಿದರೂ ಸಹ ಮುಖ್ಯಮಂತ್ರಿ ಬೊಮ್ಮಾಯಿ, ಸರಿ ಯಾದ ಸಾಕ್ಷಿ ಇಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರು. ಇದೀಗ ಎಲ್ಲವೂ ಬಟಾಬಯಲಾಗಿದೆ ಎಂದರು.

ನಿಗಮವೊಂದರ ಅಧ್ಯಕ್ಷರಾಗಿದ್ದ ಮಾಡಾಳು ವಿರುಪಾಕ್ಷಪ್ಪ ಅವರ ಪುತ್ರನ ಕಚೇರಿಯಲ್ಲಿ 40 ಲಕ್ಷ ರೂ.ಗಳ ಸಮೇತ ಬಂಧಿಸಿದ್ದಾರೆ. ಕಾರಣ ಮುಖ್ಯಮಂತ್ರಿಗಳು ಲೋಕಾ ಯುಕ್ತ ಅಧಿಕಾರಿಗಳು ಬಂಧಿಸಿರುವ ದಾಖಲೆಗಳು ಸಾಕಲ್ಲವೇ, ಕಾರಣ ಈ ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಆ ಮೂಲಕ ಇಡೀ ಸಚಿವ ಸಂಪುಟವನ್ನೇ ವಜಾ ಮಾಡಬೇಕು. ಅಲ್ಲದೇ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಬರಬೇಕಿದೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ಲೋಕಾಯುಕ್ತ ದಾಳಿ ಯಲ್ಲಿ 40 ಲಕ್ಷ ರೂ. ಲಂಚ ಸ್ಪೀಕರಿ ಸುವಾಗ ಸಿಕ್ಕಿ ಹಾಕಿಕೊಂಡಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂ ಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಹಾಗೂ ಕಚೇರಿಯಲ್ಲಿ ದೊರೆತ 1.62 ಕೋಟಿ, ಮನೆಯಲ್ಲಿ ಸುಮಾರು 6 ಕೋಟಿ ದೊರೆತಿದೆ. ಮುಖ್ಯಮಂತ್ರಿ ಗಳಿಗೆ ಇದಕ್ಕಿಂತ ಸಾಕ್ಷಿ ಬೇಕೇ, ಈ ಪ್ರಕರಣದಲ್ಲಿ ಶಾಸಕರನ್ನು ಸಹ ಬಂಧಿಸಬೇಕೆಂದು ಆಗ್ರಹಿಸಿದರು.

ಪಾಲಿಕೆ ವಿಪಕ್ಷದ ನಾಯಕ ಮಂಜುನಾಥ್ ಗಡಿಗುಡಾಳು ಮಾತ ನಾಡಿ, ಕಾಂಗ್ರೆಸ್ ಪಕ್ಷ ಬಿಜೆಪಿಯವ ರನ್ನು ವಿರೋಧಿಸಿದರೆ ನಮ್ಮನ್ನು ದೇಶದ್ರೋಹಿಗಳೆಂದು ಬಿಂಬಿಸು ತ್ತಾರೆ. ಇದೀಗ ಬಿಜೆಪಿಯವರ ಭ್ರಷ್ಠಾಚಾರ ಬಯಲಿಗೆ ಬಂದಿದೆ. ಕೇವಲ ಇವರೊಬ್ಬರೇ ಮಾತ್ರವಲ್ಲ. ಬಿಜೆಪಿಯ ಎಲ್ಲಾ ಶಾಸಕರು, ಸಚಿವರ ವಿರುದ್ಧ ಸಿಐಡಿ ತನಿಖೆ ಆಗಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಯಣ್ಣ, ಪಾಮೇನಹಳ್ಳಿ ನಾಗರಾಜ್, ಚೇತನ್‍ಕುಮಾರ್, ಕಲ್ಲಳ್ಳಿ ನಾಗರಾಜ್, ಅಲೆಕ್ಸಾಂಡರ್ ಜಾನ್, ಯುವರಾಜ್, ಮೈನುದ್ದೀನ್, ಕೆ.ಎಲ್.ಹರೀಶ್ ಬಸಾಪುರ, ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ, ಗುರುರಾಜ್, ಸೈಯದ್ ಜಿಕ್ರಿಯಾ, ಸಾಗರ್ ಮತ್ತಿತರರಿದ್ದರು.

error: Content is protected !!