ಹರಪನಹಳ್ಳಿ, ಮಾ.2- ಪಂಚ ಗಣಾಧಿಶ್ವರರಲ್ಲಿ ಒಬ್ಬರಾದ ತಾಲ್ಲೂಕಿನ ಐತಿಹಾಸಿಕ ಕೂಲಹಳ್ಳಿಯ ಶ್ರೀ ಗೋಣಿಬಸವೇಶ್ವರಸ್ವಾಮಿ ರಥೊತ್ಸವವು ಅಪಾರ ಭಕ್ತರ ಮದ್ಯೆ ಅತ್ಯಂತ ಶ್ರದ್ಧಾಭಕ್ತಿ, ಸಡಗರ ಸಂಭ್ರಮದಿಂದ ಜರುಗಿತು. ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಕ್ಷೇತ್ರದ ಗೋಣಿಬಸವೇಶ್ವರ ರಥೊತ್ಸವಕ್ಕೆ ಜನಸಾಗರವೇ ಸೇರಿತ್ತು.
ಊರ ಹೊರವಲಯದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟ ಹಾಗೂ ಹಲವು ದೇವಾನುದೇವತೆಗಳ ಭಾವಚಿತ್ರ ಅಳವಡಿಕೆಯ ಜತೆಗೆ, ಬಾಳೆದಿಂಡು, ಮಾವಿನ ತೋರಣ ಹಾಗೂ ಪುಷ್ಪ ಮಾಲೆಯೊಂದಿಗೆ ಅಲಂಕರಿಸಲಾಗಿತ್ತು.
ಮಠದ ಪೀಠಾಧಿಪತಿ ಶ್ರೀ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ಬಿರುದಾವಳಿ ಮೂಲಕ ಸಕಲ ವಾದ್ಯತಂಡಗಳ ಭಾಜಾ-ಭಜಂತ್ರಿಯೊಂದಿಗೆ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ