ಮಳೆ ಹಾನಿಗೆ ಬರದ ಪ್ರಧಾನಿ, ಚುನಾವಣೆಗೆ ಬರುತ್ತಿದ್ದಾರೆ

ಮಳೆ ಹಾನಿಗೆ ಬರದ ಪ್ರಧಾನಿ, ಚುನಾವಣೆಗೆ ಬರುತ್ತಿದ್ದಾರೆ

ಹರಿಹರ, ಫೆ. 20 – ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಯಾವುದೇ ಆಟಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಡಳಿತದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಮುಂದೆ ನಡೆಯುವುದಿಲ್ಲ. ರಾಜ್ಯದಲ್ಲಿ ಜೆಡಿಸ್ ಪಕ್ಷ ಅಧಿಕಾರಕ್ಕೆ ಬರಲಿರುವ ಕಾಲ ದೂರವಿಲ್ಲ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪಂಚರತ್ನ ಯಾತ್ರೆ ಮೂಲಕ  ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಆಡಳಿತದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮಳೆ ಹಾನಿಯಿಂದ ಲಕ್ಷಾಂತರ ರೈತರ ಬದುಕು ದುಸ್ತರವಾಗಿ ಬೆಳೆದ ಬೆಳೆಗಳಿಗೆ ಹಾನಿಯಾದರೂ ಮತ್ತು ಸಾಕಷ್ಟು ಮನೆಗಳು ನೆಲಕ್ಕೆ ಬಿದ್ದಾಗ ಆ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ರೈತರ ಬದುಕು ಏನಾಯಿತು ಎಂದು ಗಮನಿಸಲು ಬರಲಿಲ್ಲ. ಈಗ ಚುನಾವಣೆ ಬಂದಾಗ ರಾಜ್ಯಕ್ಕೆ ತಿಂಗಳಲ್ಲಿ ನಾಲ್ಕು ಬಾರಿ ಭೇಟಿ ನೀಡಿ ಜನರನ್ನು ಮರುಳು ಮಾಡಲು ಮುಂದಾಗಿದ್ದಾರೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಬಡವರಿಗೆ, ಕಾರ್ಮಿಕರಿಗೆ, ದಲಿತರಿಗೆ, ಅಸ್ಪೃಶ್ಯರಿಗೆ ಉಪಯೋಗ ಆಗುವಂತಹ ಯೋಜನೆ ಘೋಷಣೆ ಮಾಡಲಿಲ್ಲ ಎಂದು ಆಕ್ಷೇಪಿಸಿದರು.

ಜಿಲ್ಲಾ ಜೆಡಿಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ಕೋಮು ಗಲಭೆ ಸೃಷ್ಟಿ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಲಿಲ್ಲ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎ. ವಾಮನಮೂರ್ತಿ ಸದಸ್ಯರಾದ ಗುತ್ತೂರು ಜಂಬಣ್ಣ, ದಿನೇಶ್ ಬಾಬು, ಪಿ.ಎನ್. ವಿರುಪಾಕ್ಷಪ್ಪ, ರತ್ನ ಡಿ.ಉಜ್ಜೇಶ್, ಉಷಾ ಮಂಜುನಾಥ್ ಅಂಗಡಿ, ಕವಿತಾ ಮಾರುತಿ, ಲಕ್ಷ್ಮೀ ದುರಗೋಜಿ ಮೋಹನ್, ಬಿ.ಅಲ್ತಾಫ್, ಆರ್.ಸಿ. ಜಾವೇದ್, ನಗರ ಘಟಕದ ಜೆಡಿಸ್ ಪಕ್ಷದ ಅಧ್ಯಕ್ಷ ಹಬೀಬ್ ಉಲ್ಲಾ, ಮುಖಂಡರಾದ ಮುಜಾಮಿಲ್ಲಾ ಸಾಬ್, ಹಾಜಿ ಆಲಿ, ಸುರೇಶ್ ಚಂದಪೂರ್, ಅಡಕಿ ಕುಮಾರ್, ರಾಜು, ಅಂಬರೀಶ್ , ಲತಾ ಕೊಟ್ರೇಶ್, ಸುನಂದ, ಕಲ್ಲಯ್ಯ, ರಮೇಶ್, ಅಮರಾವತಿ ನಾಗರಾಜ್, ಅಶ್ರಫಿ, ಭೋಜರಾಜ್ ಹೋವಳೆ,  ಲಕ್ಷ್ಮೀ ರಾಜಾಚಾರ್,  ಉಮಾ ಇತರರು ಹಾಜರಿದ್ದರು.

error: Content is protected !!