ಕೊಟ್ಟೂರು ಭಕ್ತರ ಸಂಖ್ಯೆ ಹೆಚ್ಚಳಕ್ಕೆ ಧರ್ಮದ ಮೇಲಿಟ್ಟಿರುವ ನಂಬಿಕೆಯೇ ಕಾರಣ

ಕೊಟ್ಟೂರು ಭಕ್ತರ ಸಂಖ್ಯೆ ಹೆಚ್ಚಳಕ್ಕೆ  ಧರ್ಮದ ಮೇಲಿಟ್ಟಿರುವ ನಂಬಿಕೆಯೇ ಕಾರಣ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಮುದುಗಲ್ ನಾಗರಾಜ ಶೆಟ್ರು ವಿಶ್ಲೇಷಣೆ

ಹರಪನಹಳ್ಳಿ, ಫೆ.15 – ಕೊಟ್ಟೂರು  ರಥೋತ್ಸವಕ್ಕೆ ತೆರಳುವ ಭಕ್ತಾದಿಗಳ ಸಂಖ್ಯೆ ಹೆಚ್ಚಳಕ್ಕೆ ಜನರು ಧರ್ಮದ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಮುದುಗಲ್ ನಾಗರಾಜ ಶೆಟ್ರು ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಮಂಡಳಿ ವತಿಯಿಂದ  ಕೊಟ್ಟೂರು ಗುರು ಬಸವೇಶ್ವರ ರಥೋತ್ಸವಕ್ಕೆ ತೆರಳುವ ಪಾದಯಾತ್ರಿಗಳಿಗೆ ಔಷಧೋಪಚಾರ, ಹಣ್ಣು, ಉಪಹಾರ, ಊಟ, ಹೀಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಭಕ್ತಿ ಸಮರ್ಪಿಸಿ ಮಾತನಾಡಿದರು.

ಮನುಷ್ಯ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರು ದೇವರ ಬಗ್ಗೆ ಇರುವ ನಂಬಿಕೆ, ಭಕ್ತಿ ಕಡಿಮೆಯಾಗಿಲ್ಲ. ಭಕ್ತರು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರಿಗೆ ವೈದ್ಯರ ಮೂಲಕ ವಿವಿಧ ಔಷಧೋಪಚಾರ ನಡೆಸಲಾಯಿತು.

ಬೆಳಿಗ್ಗೆ ಉಪಹಾರ, ಮಧ್ಯಾಹ್ನ ವಿವಿಧ ಹಣ್ಣು ಗಳು, ತಂಪು ಪಾನೀಯಗಳನ್ನು ನೀಡಲಾಯಿತು. ಸಂಜೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. 

ಆರ್ಯವೈಶ್ಯ ಮಂಡಳಿ ಸಂಘದಿಂದ ಭಕ್ತರಿಗೆ ಉಪಚರಿಸುವ ಮೂಲಕ ಗುರುಬಸವೇಶ್ವರ ಸ್ವಾಮಿಗೆ ಭಕ್ತಿಯನ್ನು ಸಮರ್ಪಿಸಿದರು.

ಆರ್ಯವೈಶ್ಯ ಸಮಾಜದ ಅಧ್ಯಕ್ಷ ಮುದುಗಲ್ ನಾಗರಾಜ ಶೆಟ್ರು, ಉಪಾಧ್ಯಕ್ಷ ಬಿ.ಎಸ್.ರವಿಶಂಕರ್, ನಟೇಶ್‌ಕುಮಾರ, ಉಪ ಕಾರ್ಯದರ್ಶಿ ಕಡ್ಲಿ ನಟರಾಜ, ಖಜಾಂಚಿ ಪೆಂಡಕೂರು ಶ್ರೀಧರ, ಕಡ್ಲಿ ರಾಘವೇಂದ್ರ ಶೆಟ್ಟಿ, ಹೆಚ್.ಕೆ.ಬದರಿನಾರಾಯಣ, ಗಂಗಾವತಿ ಕಿಟ್ಟಣ್ಣ, ಭೀಮಪ್ಪ ಶೆಟ್ರು, ಬಂಕಾಪುರ ಸತೀಶ, ಗಂಗಾವತಿ ಮನೋಹರ, ಕೃಷ್ಣ ಮುದುಗಲ್, ನಾಗಾನಂದ ಮುದುಗಲ್, ಪಿ.ಮುರುಳಿ, ಅರವಿಂದ ಕೋಡಿಹಳ್ಳಿ, ಭಾಸ್ಕರ್ ಶೆಟ್ರು, ಎಸ್.ಶಂಕರ್, ವಿನಾಯಕ ಹುಬ್ಬಳ್ಳಿ, ಗುರುಪ್ರಸಾದ್ ಕಾಂಬ್ಳೆ, ಮಧುಸೂದನ್ ಬಂಕಾಪುರ, ಪಿ.ಎನ್. ರಾಜೇಂದ್ರ ಕುಮಾರ, ಪೆಂಡಕೂರ್ ಮುರುಳಿ  ಮಹಿಳಾ ಅಧ್ಯಕ್ಷರಾದ ಎಂ.ಸುಜಾತ, ಕಾರ್ಯದರ್ಶಿ ಸವಿತ, ಖಜಾಂಚಿ ಪಿ.ಎಂ.ಸೌಮ್ಯ,  ನಿರ್ದೇಶಕರುಗಳಾದ ಪಿ.ಎಸ್.ಶ್ವೇತಾ, ಜಿ.ಗಾಯತ್ರಿ, ಬಿ. ಜಯಶ್ರೀ, ಜಿ.ಪಲ್ಲವಿ,  ಎಚ್.ಗಿರಿಜಾ, ಕೆ.ನಳಿನಿ,  ಭಾಗ್ಯ, ಬಿ.  ಎಂ. ಶಾರದ,  ಜೆ. ರಂಜಿತಾ, ಕೆ.ರಜನಿ, ಪದ್ಮಾನಟೇಶ್‌, ಸಿಂಧು ಸೇರಿದಂತೆ  ಇತರರು ಇದ್ದರು.

error: Content is protected !!