ಹರಿಹರ : ಶಾಸಕ ರಾಮಪ್ಪ ನೇತೃತ್ವದಲ್ಲಿ ಬಂದ್ ಯಶಸ್ವಿ

ಹರಿಹರ, ಸೆ.28- ರೈತ ವಿರೋಧಿ, ಭೂ ಸುಧಾರಣೆ, ಎ.ಪಿ.ಎಂ.ಸಿ, ವಿದ್ಯುತ್, ಬೀಜ ಕಾಯ್ದೆ ವಾಪಸ್‌ ಪಡೆಯುವಂತೆ ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು  ಕರೆ ನೀಡಿದ್ದ ಬಂದ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ಸೇನೆ, ಜೈ ಕರ್ನಾಟಕ, ಹಮಾಲರ ಸಂಘ, ಬೀದಿ ವ್ಯಾಪಾರಿಗಳ ಸಂಘ ಹಾಗೂ ನಗರದ ಜನತೆ ಸಂಪೂರ್ಣವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಗಾಂಧಿ ವೃತ್ತದಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಮೋದಿ, ಯಡಿಯೂರಪ್ಪ, ಅಮಿತ್ ಷಾ  ವಿರುದ್ಧ ಘೋಷಣೆ ಕೂಗಿ ಅವರ ಪ್ರತಿಕೃತಿ ದಹನ ಮಾಡಲಾಯಿತು. ಮನವಿ  ಸ್ವೀಕರಿಸಲು ತಡವಾಗಿ ಆಗಮಿಸಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪನವರ ವಿರುದ್ಧ ಧಿಕ್ಕಾರದ ಘೋಷಣೆ ಮಾಡಿ, ನಂತರದಲ್ಲಿ ತಹಶೀಲ್ದಾರ್‌ರವರಿಗೆ ಮನವಿ ಅರ್ಪಿಸಿದರು.

ನಗರದಲ್ಲಿ ಹಾಲು, ಔಷಧಿ, ಆಸ್ಪತ್ರೆ, ಬಸ್ ಸಂಚಾರ ಮತ್ತು ಅಗತ್ಯ ವಸ್ತುಗಳ  ವ್ಯಾಪಾರ ವಹಿವಾಟು ಹೊರತು ಪಡಿಸಿ, ಹಲವಾರು ವ್ಯಾಪಾರಿ ಸ್ಥಳಗಳನ್ನು ಬಂದ್ ಮಾಡಿದ್ದರಿಂದ ಮುಖ್ಯ ರಸ್ತೆ, ದೇವಸ್ಥಾನ ರಸ್ತೆ, ರಾಣಿಚೆನ್ನಮ್ಮ ವೃತ್ತ, ಹಳೆ ಪಿ.ಬಿ. ರಸ್ತೆ, ಶಿವಮೊಗ್ಗ ರಸ್ತೆ, ಹರಪನಹಳ್ಳಿ ರಸ್ತೆ, ಹೈಸ್ಕೂಲ್ ಬಡಾವಣೆ, ತರಕಾರಿ ಮಾರುಕಟ್ಟೆ ಮುಂತಾದ ಕಡೆಗಳಲ್ಲಿ ಸಾರ್ವಜನಿಕರ ಓಡಾಟ ಇಲ್ಲದೆ ಬಿಕೋ ಎನ್ನುತ್ತಿದ್ದವು.

ಈ ವೇಳೆ ಮಾತನಾಡಿದ ಶಾಸಕ ಎಸ್. ರಾಮಪ್ಪ ರೈತರ ಪರವಾಗಿ ಆಡಳಿತ ಮಾಡಬೇಕಾದ ಸರ್ಕಾರ ರೈತರ ವಿರುದ್ಧ ಆಡಳಿತ ಮಾಡುವುದಕ್ಕೆ ಮುಂದಾಗಿದೆ. ಬಿಜೆಪಿ ಸರ್ಕಾರ ಬಂಡವಾಳ ಶಾಹಿ ಪರವಾಗಿ ಇರುವುದರಿಂದ ಭೂ ಸುಧಾರಣೆ ಕಾಯ್ದೆ ಜಾರಿಗೆ ತರುತ್ತಿದೆ. ಇದರಿಂದಾಗಿ ರೈತ ಕುಟುಂಬದ ಸದಸ್ಯರು ಸಂಕಷ್ಟದ ಸ್ಥಿತಿ ತಲುಪುತ್ತಾರೆ. ಇದರಿಂದ ಮುಂದೆ ರೈತರು ಎಂದು ಹೇಳಿಕೊಳ್ಳಲು ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸುಗ್ರೀವಾಜ್ಷೆ ಜಾರಿಗೆ ತಂದು ರೈತರ ಕುತ್ತಿಗೆಯನ್ನು ಹಿಸುಕುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಎಪಿಎಂಸಿ ಸದಸ್ಯ ಮಂಜುನಾಥ್ ಕೊಮಾರನಹಳ್ಳಿ ಮಾತನಾಡಿ,  ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರೈತರನ್ನು ಶೋಷಣೆ ಮಾಡುವುದಕ್ಕೆ ಮುಂದಾಗಿ ರಾಜ್ಯದ ಸುಮಾರು 62 ಎಪಿಎಂಸಿಗಳನ್ನು ಮುಚ್ಚುವು ದಕ್ಕೆ ಮುಂದಾಗಿದೆ. ಈ ಬೆಳವಣಿಗೆಯನ್ನು ಕೈ ಬಿಡಬೇಕು ಎಂದು ಹೇಳಿದರು.

ಈ ವೇಳೆ ರೈತ ಸಂಘದ ಮುಖಂಡರಾದ ಪ್ರಭುಗೌಡ್ರು, ಹಾಳೂರು ನಾಗರಾಜ್, ಪ್ರಕಾಶ್, ಕೊಟ್ರೇಶ್ ಭಾನುವಳ್ಳಿ. ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಕಾಂಗ್ರೆಸ್ ಮಾಧ್ಯಮ ವಕ್ತಾರ ನಿಖಿಲ್ ಕೊಂಡಜ್ಜಿ, ಕನ್ನಡ ಪರ ಸಂಘಟನೆಯ ಎಕ್ಕೆಗೊಂದಿ ರುದ್ರಗೌಡ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ನಗರಸಭೆ ಸದಸ್ಯ ಶಂಕರ್ ಖಟಾವ್ಕಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬಿದ್ ಅಲಿ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸುದೇವ್, ಡಿ.ಸಿ.ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಆನಂದಪ್ಪ ಜಿಗಳಿ ಮುಂತಾದ ಮುಖಂಡರು ಮಾತನಾಡಿದರು.

ಈ ಸಂದರ್ಭದಲ್ಲಿ ಕೆ.ವಿ. ರುದ್ರಮುನಿ, ಮಹೇಶಪ್ಪ ದೊಗ್ಗಳ್ಳಿ, ಹೆಚ್. ಚಂದ್ರಪ್ಪ ಅಮರಾವತಿ, ಶಂಭುಲಿಂಗಪ್ಪ ನಂದಿತಾವರೆ, ರೇವಣಸಿದ್ದಪ್ಪ ಹನಗವಾಡಿ, ಬಸವರಾಜ್, ಬಿ.ಆರ್. ಸಂತೋಷ್, ಡಿ. ಉಮೇಶ್, ಬಿ. ಕರಿಯಪ್ಪ, ನಾಗರಾಜ್ ಗೌಡ, ಕೆ.ಬಿ.ಕೆ. ಪ್ರಕಾಶ್ ಕೊಂಡಜ್ಜಿ, ತಿಪ್ಪೇಶ್, ವೀರಣ್ಣ, ರುದ್ರಪ್ಪ, ನಂದೀಶ್ ನಂದಿತಾವರೆ, ಮಂಜಪ್ಪ, ಶಿವನಗೌಡ್ರು, ಅಂಜಿನಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ. ರೇವಣಸಿದ್ದಪ್ಪ, ಕೆ.ಜಡಿಯಪ್ಪ, ತಾಪಂ ಸದಸ್ಯ ಆದಾಪುರ ವೀರಭದ್ರಪ್ಪ, ಕನ್ನಪ್ಪ ಭಾನುವಳ್ಳಿ, ವಸಂತ್, ಕೆ.ಜಿ. ಸಿದ್ದೇಶ್, ಮರಿದೇವ್, ರಘುಪತಿ, ವೀರೇಶ್, ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ ರಡ್ಡಿ, ಮೆಹಬೂಬ್ ಭಾಷಾ, ದಾದಾಪೀರ್ ಭಾನುವಳ್ಳಿ,  ರಮೇಶ್ ನಾಯ್ಕ್, ಅರ್ಜಾನಾಯ್ಕ್, ತಿಪ್ಪೇಶ್, ಸಂತೋಷ್ ನೋಟದರ, ಆಸೀಫ್ ಕನ್ನಡ ಪರ ಸಂಘಟನೆಯ ಪ್ರವೀಣ್ ಹನಗವಾಡಿ, ರಮೇಶ್ ಮಾನೆ, ಗೋವಿಂದ, ಇಲಿಯಾಸ್ ಅಹ್ಮದ್, ಹಾಗು ಇತರರು ಹಾಜರಿದ್ದರು. 

ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಎಸ್. ಶಿವಪ್ರಸಾದ್, ಸಬ್ ಇನ್ಸ್‌ಪೆಕ್ಟರ್‌ಗ ಳಾದ ಎಸ್. ಶೈಲಶ್ರೀ, ಜಿ. ರವಿಕುಮಾರ್, ಶಿವ ಬಸಪ್ಪ ಮಲೇಬೆನ್ನೂರು ಮತ್ತಿತರರು ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

error: Content is protected !!