ದಾವಣಗೆರೆ, ಸೆ.23- ನಗರ ಪಾಲಿಕೆ ವತಿಯಿಂದ ನಗರದ ಪಿ.ಬಿ. ರಸ್ತೆಯ ಡಿಸಿಎಂ ಟೌನ್ ಶಿಪ್ನಿಂದ ಜಿಎಂಐಟಿ ಕಾಲೇಜ್ ವರೆಗಿರುವ ಡಿವೈಡರ್ ಮೇಲ್ಭಾಗದಲ್ಲಿ ಅಂದಾಜು 16 ಲಕ್ಷ ರೂ. ಮೊತ್ತದ ಅಲಂಕಾರಿಕ ಗಿಡವಾದ ಬೌಗೇನ್ ವಿಲ್ಲಿಯ ಸಸಿ ನೆಡುವ ಕಾರ್ಯಕ್ಕೆ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಅವರು ಇಂದು ಚಾಲನೆ ನೀಡಿದರು. ಈ ವೇಳೆ ನಗರ ಪಾಲಿಕೆ ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್.ಟಿ.ವೀರೇಶ್, ಗೌರಮ್ಮ ಗಿರೀಶ್, ಸದಸ್ಯರಾದ ಗಾಯತ್ರಿ ಖಂಡೋಜಿರಾವ್, ಶಿವು, ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ಇತರರು ಇದ್ದರು.
December 25, 2024