ಬೆಂಗಳೂರು, ಸೆ. 21 – ರಾಜ್ಯದಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಹಲವಾರು ಗ್ರಾಮಗಳು ಜಲಾವೃತವಾಗಿವೆ, ಮನೆಗಳು ನೀರಿನಲ್ಲಿ ಮುಳುಗಿದ್ದರೆ, ವಾಹನಗಳು ಕೊಚ್ಚಿ ಹೋ ಗಿವೆ ಹಾಗೂ ಬೆಳೆಗಳಿಗೆ ಹಾನಿಯಾಗಿದೆ.
ರಾಜ್ಯ ವಿಕೋಪ ನಿರ್ವಹಣಾ ಕೇಂ ದ್ರದ ವರದಿಯ ಪ್ರಕಾರ ರಾಜ್ಯದ ಎಲ್ಲಾ ಅಣೆಕಟ್ಟೆಗಳು ತುಂಬಿದ್ದು, ಪ್ರವಾಹ ಪರಿ ಸ್ಥಿತಿ ಉಂಟಾಗಿದೆ. ಅಣೆಕಟ್ಟೆಗಳ ಬಾಗಿಲು ತೆರೆದಿರುವು ದರಿಂದ ನದಿಗಳು ಉಕ್ಕಿ ಹರಿ ಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾ ಗಿದೆ. ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಹಲ ವಾರು ಹಳ್ಳಿಗಳು ಸಮಸ್ಯೆ ಎದುರಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭದ್ರಾ, ತುಂಗಭದ್ರಾ, ಘಟಪ್ರಭ, ಮಲಪ್ರಭ, ಆಲಮಟ್ಟಿ ಹಾಗೂ ನಾರಾ ಯಣಪುರ ಅಣೆಕಟ್ಟೆಗಳು ತುಂಬಿವೆ.
ಶುಕ್ರವಾರದಿಂದ ಧಾರಾಕಾರ ಮಳೆ ಕಾಣುತ್ತಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ.
ಉಡುಪಿಯಲ್ಲಿ ಅತಿ ಹೆಚ್ಚು ಹಾನಿ ಯಾಗಿದೆ. ಹಲವಾರು ತಾಲ್ಲೂಕುಗಳಲ್ಲಿ ನಾಶದ ಸರಮಾಲೆಯೇ ಉಂಟಾಗಿದೆ. ಹಲವಾರು ಕೋಟಿ ರೂ.ಗಳ ನಷ್ಟವಾಗಿದೆ.
ಮಂಗಳೂರಿನಿಂದ ಎನ್.ಡಿ.ಆರ್.ಎಫ್. ತಂಡವೊಂದು ಉಡುಪಿಗೆ ತಲುಪಿದ್ದು, ಪ್ರವಾಹ ಪರಿಹಾರಕ್ಕೆ ನೆರವಾಗುತ್ತಿದೆ. ಶ್ರೀಕೃಷ್ಣ ಮಠದ ಆವರಣ ಸೇರಿದಂತೆ ನಗರದ ಹಲವಾರು ತಾಣಗಳು ಜಲಾವೃತವಾಗಿವೆ. ಜಿಲ್ಲೆಯ ಹಲವು ಪ್ರದೇಶಗಳ ರಸ್ತೆ ಸಂಚಾರ ಕಡಿತಗೊಂಡಿದೆ. ಎನ್.ಡಿ.ಆರ್.ಎಫ್. ಸಿಬ್ಬಂದಿ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದ್ದಾರೆ.
ಜಿಲ್ಲೆಯ ಸ್ವರ್ಣ ಹಾಗೂ ಸೀತಾನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯಲ್ಲಿ 31 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ದಕ್ಷಿಣ ಕನ್ನಡದಲ್ಲಿ ಹಲವಾರು ಮನೆ ಹಾಗೂ ಕಟ್ಟಡಗಳು ಜಲಾವೃತವಾಗಿವೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಮಂಗಳೂರು ಹಾಗೂ ಬಂಟ್ವಾಳಗಳಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ಜಿಲ್ಲೆಯಲ್ಲಿ ಐದು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 1,250 ಜನರನ್ನು ಸುರಕ್ಷಿತ ಕೇಂದ್ರಗಳಿಗೆ ರವಾನಿಸಲಾಗಿದೆ.
ಇನ್ನೂ ಎರಡು ದಿನಗಳ ಕಾಲ ಧಾರಾಕಾರ ಮಳೆ ಮುಂದುವರೆಯಲಿದೆ. ಬೆಸ್ತರು ಸಮುದ್ರಕ್ಕೆ ತೆರಳಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.