ಕೂಡ್ಲಿಗಿ ತಾಲ್ಲೂಕಿನಲ್ಲಿ ಮಳೆ ಅವಾಂತರ

ಕೂಡ್ಲಿಗಿ, ಸೆ.20- ಕೂಡ್ಲಿಗಿ ತಾಲ್ಲೂಕಿನಲ್ಲಿ ಜುಲೈನಿಂದ ಇಲ್ಲಿಯವ ರೆಗೂ 115 ಮನೆಗಳು ಜಖಂ ಗೊಂಡಿದ್ದು, ಇತ್ತೀಚೆಗೆ ಎಡಬಿಡದೇ ಸುರಿಯುತ್ತಿರುವ ಮಳೆಗೆ 25ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ. ಮನೆ ಕಳೆದುಕೊಂಡವರ ಬದುಕು ದುಸ್ತರವಾಗಿದೆ. ಮಳೆಯಿಂದ ಬೆಳೆಗಳಿಗೆ ಯಾವುದೇ ರೀತಿಯ ಗಂಭೀರ ಹಾನಿಯಾಗಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆ ಹಿಂಗಾರು ಬೆಳೆಗಳಿಗೆ ಅನುಕೂಲವಾಗಿದೆ. 

ಮಳೆ ಜೋರಾಗಿ ಬಂದು ನಿಂತರೆ ಬೆಳೆಗಳಿಗೆ, ಮನೆಗಳಿಗೆ ಹಾನಿಯಾಗು ವುದಿಲ್ಲ. ಈಗ್ಗೆ ನಾಲ್ಕೈದು ದಿನಗಳಿಂದ ನಿರಂತರವಾಗಿ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ಜೋಳ ಹಾಗೂ ಮುಂಗಾರು ಮೆಕ್ಕೆಜೋಳ ಕಟಾವು ಮಾಡಲಿಕ್ಕೆ ಹಾಗೂ ಒಕ್ಕಲು ತನಕ್ಕೆ ರೈತರಿಗೆ ತೊಂದರೆಯಾಗಿದ್ದು, ಜೋಳ ಹಾಗೂ ಮೆಕ್ಕೆಜೋಳ ಕಟಾವು ಮಾಡಿ ಜಾಗವಿಲ್ಲದ್ದಕ್ಕೆ ಹಳ್ಳಿಯ ರಸ್ತೆಗಳ  ಪಕ್ಕದಲ್ಲಿ ಹಾಕಲಾಗಿದ್ದು, ಮಳೆಯಿಂದ ರಕ್ಷಿಸಿಕೊಳ್ಳುವುದೇ ರೈತರಿಗೆ ಸವಾ ಲಾಗಿದೆ. ಇದೇ ರೀತಿ ಇನ್ನೂ ನಾಲ್ಕೈದು ದಿನ ಜಿಟಿ ಜಿಟಿ ಮಳೆಯಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮನೆಗಳಿಗೆ ಹಾಗೂ ಬೆಳೆಗಳಿಗೆ ಹಾನಿಯಾಗುತ್ತದೆ. ಜಿಟಿ ಜಿಟಿ ಮಳೆ ನಿಂತರೆ ಮಾತ್ರ ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. 

ಮಳೆ ವಿವರ : ಭಾನುವಾರ ರಾತ್ರಿ ಕೂಡ್ಲಿಗಿಯಲ್ಲಿ 52 ಮಿ.ಮೀ. ಮಳೆಯಾಗಿದ್ದು, ಕೊಟ್ಟೂರಿನ ಹೊಸಹಳ್ಳಿಯಲ್ಲಿ 15.7 ಮಿ.ಮೀ.ಮಳೆಯಾಗಿದೆ. ಗುಡೇಕೋಟೆಯಲ್ಲಿ 17.2 ಮಿ.ಮೀ. ಮಳೆಯಾಗಿದೆ. ಬಣವಿಕಲ್ಲು ಗ್ರಾಮದಲ್ಲಿ 12.4 ಮಿ.ಮೀ. ಮಳೆಯಾಗಿದೆ. ಚಿಕ್ಕಜೋಗಿಹಳ್ಳಿಯಲ್ಲಿ 18.4 ಮಿ.ಮೀ. ಮಳೆಯಾಗಿದೆ. ಸೆ.4 ರಂದು ಸಹ ಭಾರೀ ಮಳೆಯಾಗಿದ್ದು, ಕೂಡ್ಲಿಗಿಯಲ್ಲಿ 55 ಮಿ.ಮೀ, ಹೊಸಹಳ್ಳಿಯಲ್ಲಿ 45.6 ಮಿ.ಮೀ, ಗುಡೇಕೋಟೆಯಲ್ಲಿ 65.2 ಮಿ.ಮೀ, ಬಣವಿಕಲ್ಲು ನಲ್ಲಿ 68.4 ಮಿ.ಮೀ, ಚಿಕ್ಕಜೋಗಿಹಳ್ಳಿಯಲ್ಲಿ 65.4 ಮಿ.ಮೀ ಮಳೆಯಾಗಿತ್ತು. ಸೆ.9 ರಂದು ಕೂಡ್ಲಿಗಿಯಲ್ಲಿ 17.8 ಮಿ.ಮೀ, ಹೊಸಹಳ್ಳಿಯಲ್ಲಿ 29.8 ಮಿ.ಮೀ, ಗುಡೇಕೋಟೆಯಲ್ಲಿ 17.2 ಮಿ.ಮೀ, ಬಣವಿಕಲ್ಲು ನಲ್ಲಿ 42.1 ಮಿ.ಮೀ, ಚಿಕ್ಕಜೋಗಿಹಳ್ಳಿಯಲ್ಲಿ 11.2 ಮಿ.ಮೀ. ಮಳೆಯಾಗಿದ್ದು ಉಳಿದ ದಿನಗಳಲ್ಲಿ ಸಾಧಾರಣ ಮಳೆಯಾಗಿದೆ.  ಇದೇ ರೀತಿ ವಾರಗಟ್ಟಲೇ ಮಳೆಯಾಗುವ ಮೂಲಕ ತಾಲ್ಲೂಕಿನ ರೈತರಲ್ಲಿ ಆಶಾಭಾವನೆ ಮೂಡಿಸಿದೆ. 

error: Content is protected !!