ನವದೆಹಲಿ, ಸೆ. 11 – ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಮುಂದುವರೆದ ದೇಶಗಳಿಗೆ ಹಾಗೂ ಇಡೀ ವಿಶ್ವದ ಸರಾಸರಿಗೆ ಹೋಲಿಸಿದರೆ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸುತ್ತಾ ಬಂದಿದೆ. ಆದರೆ, ಸಾವಿನ ಅಳತೆಯ ಈ ಮಾನದಂಡ ಸೂಕ್ತವೇ ಎಂಬ ಪ್ರಶ್ನೆ ಎದುರಾಗಿದೆ. ಸಾವಿನ ಪ್ರಮಾಣವನ್ನು ಅಳೆಯುವಾಗ ಆ ದೇಶಗಳಲ್ಲಿನ ವಯೋಮಾನವನ್ನೂ ಪರಿಗಣಿಸಬೇಕು ಎಂದು ಇತ್ತೀಚಿನ ಅಧ್ಯಯನಯವೊಂದು ಹೇಳಿದೆ.
ಅಮೆರಿಕದ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರೀಸರ್ಚ್, ನ್ಯೂಯಾರ್ಕ್ ವಿವಿಗಳು ಭಾರತ ಹಾಗೂ ಇತರೆ 14 ದೇಶಗಳ ಸಾವಿನ ದರವನ್ನು ವಯೋಮಾನವನ್ನು ಪರಿಗಣಿಸಿ ಲೆಕ್ಕ ಹಾಕಿವೆ.