ಭದ್ರಾ ಬಹುತೇಕ ಭರ್ತಿ : ನದಿಗೆ ನೀರು ಬಿಡುಗಡೆ

ಶಿವಮೊಗ್ಗ, ಸೆ.11- ಭದ್ರಾ ಜಲಾಶಯವು ಗರಿಷ್ಠ ಮಟ್ಟ 186 ಅಡಿ ತಲುಪಲು ಒಂದೂವರೆ ಅಡಿ ಮಾತ್ರ ಬಾಕಿ ಇದ್ದು, ಜಲಾಶಯದ ಹಿತದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ಡ್ಯಾಂನಿಂದ ನದಿಗೆ ನೀರು ಹರಿಸುವ ಸಂಭವವಿದೆ.

ಈ ಕುರಿತು ಸೂಚನೆ ನೀಡಿರುವ ಭದ್ರಾ ಅಧೀಕ್ಷಕ ಇಂಜಿನಿಯರ್ ಅವರು, ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಆದ್ದರಿಂದ ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಿಗ್ಗೆ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುವುದು. ತುಂಗಭದ್ರಾ ನದಿ ಪಾತ್ರದ ಜನರು ಈ ಕುರಿತು ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ.

ಶುಕ್ರವಾರ ಬೆಳಗಿನ ವರದಿ ಪ್ರಕಾರ ಜಲಾಶಯಕ್ಕೆ 2864 ಕ್ಯೂಸೆಕ್ಸ್ ಒಳಹರಿವು ಇದ್ದು, ನೀರಿನ ಮಟ್ಟ 184.6 ಇಂಚು ಆಗಿತ್ತು.

ಕಳೆದ ವರ್ಷ ಆಗಸ್ಟ್ 10 ರ ವೇಳೆಗೆ ಜಲಾಶಯ ಭರ್ತಿಯಾಗಿ, ನದಿಗೆ ನೀರು ಬಿಡಲಾಗಿತ್ತು. ಈ ವರ್ಷ ತಡವಾಗಿಯಾದರೂ ಜಲಾಶಯ ಭರ್ತಿಯಾಗಿರುವುದು ಅಚ್ಚುಕಟ್ಟಿನ ರೈತರಿಗೆ ಇನ್ನಿಲ್ಲದ ಸಂತಸ ತಂದಿದೆ. ಮಳೆಗಾಲದ ಬೆಳೆಯ ಜೊತೆಗೆ ಬೇಸಿಗೆ ಬೆಳೆಯನ್ನು ಬೆಳೆಯಬಹುದೆಂಬ ವಿಶ್ವಾಸದಲ್ಲಿ ಅಚ್ಚುಕಟ್ಟಿನ ರೈತರಿದ್ದಾರೆ.

error: Content is protected !!