ಗೀಜಗ ತನ್ನ ಗೂಡು ಕಟ್ಟುವುದು ನೋಡುವುದೇ ಸೋಜಿಗ. ನೇಯ್ಗೆ ಹಕ್ಕಿ ಎಂತಲೂ ಕರೆಯಲ್ಪಡುವ ಗೀಜಗ ಸಾಮಾನ್ಯವಾಗಿ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೂ ಗೂಡುಗಳನ್ನು ಕಟ್ಟುತ್ತದೆ. ಈ ಅವಧಿ ಮುಂಗಾರು ಮಳೆಗಾಲಕ್ಕೂ ಭತ್ತದ ಅಥವಾ ದವಸಗಳ ಕೊಯ್ಲಿಗೂ ಹೊಂದಿಕೊಳ್ಳತ್ತದೆ.
ಸಾಧಾರಣವಾಗಿ ನದಿ, ಕೆರೆ ನೀರಿನ ಮೇಲೆ ಬಾಗಿರುವ ಮರದ ರೆಂಬೆಗಳ, ಈಚಲು ಗರಿಗಳ ತುದಿಯಲ್ಲಿ ಇಲ್ಲವೆ ನೀರಿನಲ್ಲಿ ಬೆಳೆಯುವ ಜೋಡುಗಳ ಮಧ್ಯೆ ಗೂಡನ್ನು ನಿರ್ಮಿಸುತ್ತವೆ. ಗೂಡುಗಳ ನಿರ್ಮಾಣಕ್ಕೆ ಭತ್ತದ ಹುಲ್ಲುಗಳನ್ನು ಬಳಸುತ್ತವೆ. ತಮ್ಮ ಕೊಕ್ಕು, ಕಾಲುಗಳನ್ನು ಕುಶಲತೆ ಯಿಂದ ಬಳಸುತ್ತಾ ಗೂಡು ನಿರ್ಮಿಸು ವುದು ನೋಡಲು ಬಲು ಚೆನ್ನ. ದಾವಣಗೆರೆ ಸಮೀಪದ ಆವರಗೆರೆ ಕೆರೆ ಬಳಿಯ ಚಿತ್ರವಿದು.