ಜಿಲ್ಲೆಯಲ್ಲಿ 297 ಸೋಂಕು, ಮೂವರ ಸಾವು

ಜಿಲ್ಲೆಯಲ್ಲಿ 297 ಸೋಂಕು, ಮೂವರ ಸಾವು - Janathavani

ದಾವಣಗೆರೆ, ಸೆ. 12 – ಜಿಲ್ಲೆಯಲ್ಲಿ ಗುರುವಾರ 297 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದೇ ದಿನ ಮೂವರು ಸೋಂಕಿನಿಂದ ಮೃತಪಟ್ಟಿದ್ದರೆ, 244 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿಗೆ ಗುರಿಯಾದವರ ಸಂಖ್ಯೆ 12 ಸಾವಿರದ ಗಡಿ ದಾಟಿದ್ದು 12,189ಕ್ಕೆ ತಲುಪಿದೆ. ಇದೇ ವೇಳೆ ಬಿಡುಗಡೆಯಾದವರ ಸಂಖ್ಯೆಯೂ 9,213ಕ್ಕೆ ತಲುಪಿದೆ. ಇದುವರೆಗೂ 223 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ದಾವಣಗೆರೆ ತಾಲ್ಲೂಕಿನ 118, ಹರಿಹರದ 60, ಜಗಳೂರಿನ 13, ಚನ್ನಗಿರಿಯ 49, ಹೊನ್ನಾಳಿಯ 46 ಹಾಗೂ ಹೊರ ಜಿಲ್ಲೆಗಳ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದೇ ದಿನ ದಾವಣಗೆರೆ ತಾಲ್ಲೂಕಿನ 162 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ. ಹರಿಹರದ 24, ಜಗಳೂರಿನ 19, ಚನ್ನಗಿರಿಯ 15, ಹೊನ್ನಾಳಿಯ 23 ಹಾಗೂ ಹೊರ ಜಿಲ್ಲೆಯ ಒಬ್ಬರು ಗುಣವಾಗಿ ಬಿಡುಗಡೆಯಾಗಿದ್ದಾರೆ. ದಾವಣಗೆರೆಯ ಪಿ.ಜೆ. ಬಡಾವಣೆಯ 75 ವರ್ಷದ ಪುರುಷ ಕೊರೊನಾದಿಂದ ಮೃತಪಟ್ಟಿದ್ದು, ಇವರು ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಹಲವು ಅನಾರೋಗ್ಯಗಳಿಂದ ಬಳಲುತ್ತಿದ್ದರು.

ದಾವಣಗೆರೆಯ ನಿಟುವಳ್ಳಿಯ 60 ವರ್ಷದ ಮಹಿಳೆ ಹಾಗೂ ಹರಿಹರದ ಜೆ.ಸಿ. ಬಡಾವಣೆಯ 73 ವರ್ಷದ ಪುರುಷ ಸಹ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

 


 

ಮಲೇಬೆನ್ನೂರು ಹೋಬಳಿಯಲ್ಲಿ 14 ಜನರಿಗೆ ಸೋಂಕು

ಮಲೇಬೆನ್ನೂರು : ಗುರುವಾರ ಮಲೇ ಬೆನ್ನೂರು ಹೋಬಳಿಯಲ್ಲಿ 14 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಲೇಬೆನ್ನೂರಿನಲ್ಲಿ 6 ಜನರಿಗೆ ನಂದಿಗಾವಿಯಲ್ಲಿ ನಾಲ್ವರಿಗೆ ಯಲವಟ್ಟಿ, ಕೊಕ್ಕನೂರು, ಹಾಲಿವಾಣ, ವಾಸನ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲದೆ ಎಂದು ಉಪತಹಶೀಲ್ದಾರ್ ರವಿ ತಿಳಿಸಿದ್ದಾರೆ.

error: Content is protected !!