255 ಸೋಂಕು, ಇಬ್ಬರ ಸಾವು

255 ಸೋಂಕು, ಇಬ್ಬರ ಸಾವು - Janathavani

ದಾವಣಗೆರೆ, ಸೆ. 9 – ಜಿಲ್ಲೆಯಲ್ಲಿ ಒಂದೇ ದಿನ 255 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 

ಇದೇ ದಿನದಂದು 405 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 2,703ಕ್ಕೆ ಇಳಿಕೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 11,892 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 8,969 ಜನ ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ. 220 ಜನರು ಸಾವನ್ನಪ್ಪಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 119, ಹರಿಹರದಲ್ಲಿ 28, ಜಗಳೂರಿನಲ್ಲಿ 13, ಚನ್ನಗಿರಿಯಲ್ಲಿ 48, ಹೊನ್ನಾಳಿಯಲ್ಲಿ 38 ಹಾಗೂ ಹೊರ ಜಿಲ್ಲೆಗಳ 9 ಜನರಿಗೆ ಕೊರೊನಾ ಸೋಂಕು ಬಂದಿದೆ.

ಇದೇ ದಿನದಂದು ದಾವಣಗೆರೆ ತಾಲ್ಲೂಕಿನ 196, ಹರಿಹರದ 48, ಜಗಳೂರಿನ 22, ಚನ್ನಗಿರಿಯ 69, ಹೊನ್ನಾಳಿಯ 55 ಹಾಗೂ ಹೊರ ಜಿಲ್ಲೆಗಳ 15 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ.

ಚನ್ನಗಿರಿಯ ಬಸವಾಪಟ್ಟಣದ 64ರ ಪುರುಷ ಸಾವನ್ನಪ್ಪಿದ್ದಾರೆ. ಇವರಿಗೆ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಗಳಿದ್ದವು. ಹರಿಹರದ ದೂಳೇಹೊಳೆಯ 70 ವರ್ಷದ ಪುರುಷ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ.

error: Content is protected !!