ದಾವಣಗೆರೆ, ಸೆ. 7- ಜಿಲ್ಲೆಯಲ್ಲಿ ಸೋಮವಾರ 199 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ ಬಗ್ಗೆ ವರದಿಯಾಗಿದೆ. 3 ಜನರು ಸಾವನ್ನಪ್ಪಿದ್ದು, 173 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 11397 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8366 ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2815 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 96, ಹರಿಹರ 27, ಜಗಳೂರು 14, ಚನ್ನಗಿರಿ 31, ಹೊನ್ನಾಳಿ 25 ಹಾಗೂ ಹೊರ ಜಿಲ್ಲೆಯ 6 ಜನರಲ್ಲಿ ಸೋಂಕು ದೃಢಪಟ್ಟಿದೆ.
ದಾವಣಗೆರೆಯ ಬಂಬೂ ಬಜಾರ್ನ 30 ವರ್ಷದ ಪುರುಷ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಇವರಿಗೆ ಕಿಡ್ನಿ ಸಮಸ್ಯೆ ಇರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ದೇವರಾಜ ಅರಸು ಬಡಾವಣೆಯ 64 ವರ್ಷದ ಪುರುಷ ಹಾಗೂ ಹರಿಹರ ಎ.ಕೆ. ಕಾಲೋನಿಯ 55 ವರ್ಷದ ಪುರುಷ ಸಹ ಸೋಂಕಿನಿಂದ ಮೃತಪಟ್ಟಿದ್ದಾರೆ.