ಯುರೋಪ್ ಸೇರಿ ವಿಶ್ವದಾದ್ಯಂತ ಶಾಲೆಗಳು ಪುನರಾರಂಭ

ಪ್ಯಾರಿಸ್, ಅ. 4 – ಯುರೋಪ್‌ ದೇಶಗಳಿಂದ ಹಿಡಿದು ರಷ್ಯಾ ಹಾಗೂ ಇಸ್ರೇಲ್‌ವರೆಗಿನ ಹತ್ತಾರು ದೇಶಗಳ ಶಾಲೆ ಗಳು ಪುನರಾರಂಭವಾಗಿವೆ. ಕೋಟ್ಯಂ ತರ ಮಕ್ಕಳು ಮತ್ತೆ ಕಲಿಕೆಯ ಹಾದಿಗೆ ಮರಳಿದ್ದಾರೆ.

ಕೊರೊನಾ ಕರಿ ನೆರಳು ಎಲ್ಲೆಡೆ ಆವರಿ ಸಿದೆ. ಆದರೂ ಅಸಮಾನತೆ ನೀಗಿ ಸಲು ಹಾಗೂ ಆರ್ಥಿಕತೆಗೆ ಉತ್ತೇಜನ ನೀಡಲು ಶಿಕ್ಷಣ ಅನಿವಾರ್ಯವಾದ ಕಾರಣ ಜಗತ್ತಿನ ಹತ್ತು ಹಲವು ದೇಶಗಳು ಈ ಬೃಹತ್ ಶಾಲಾರಂಭ ಪ್ರಯೋಗಕ್ಕೆ ಮುಂದಾಗಿವೆ.

ಮಾಸ್ಕ್‌ ಧರಿಸಿದ ಮಕ್ಕಳನ್ನು ಪೋಷಕರು ಕಳವಳದಿಂದ ಕಳಿಸಿದರೆ, ಶಿಕ್ಷಕರು ಕಾಳಜಿ ಭರಿತ ಆತಂಕದಿಂದಲೇ ಮಕ್ಕಳನ್ನು ಬರ ಮಾಡಿಕೊಂಡಿದ್ದಾರೆ. 

ಫ್ರಾನ್ಸ್, ಬ್ರಿಟನ್, ಇಸ್ರೇಲ್, ರಷ್ಯಾ, ಬಾಲ್ಕನ್ ದೇಶಗಳಲ್ಲಿ ಶಾಲೆಗಳು ಪೂರ್ಣಾ ರಂಭ ಕಂಡಿವೆ. ಅಮೆರಿಕದಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್‌ ಮಿಶ್ರಣ ಮಾಡಿ ಕಲಿಕೆಗೆ ಚಾಲನೆ ನೀಡಲಾಗಿದೆ. ಮೊದಲನೇ ತರಗತಿಯ ಮಗುವನ್ನು ಶಾಲೆಗೆ ಕರೆ ತಂದಿರುವುದು ಸ್ವಲ್ಪ ಭಯವನ್ನೇ ಹುಟ್ಟಿಸಿದೆ ಎಂದು ಪ್ಯಾರಿಸ್‌ನ ಹೊರ ವಲಯದಲ್ಲಿರುವ ರೋಸಿ ಎನ್ ಬ್ರೀ ಯಲ್ಲಿರುವ ಬಾಪ್ಟಿಸ್ಟ್ ಶಾಲೆಗೆ ಮ ಗುವನ್ನು ಕರೆ ತಂದ ತಂದೆ ಜೆರೊಮೆ ತಿಳಿಸಿದ್ದಾರೆ.

ನೆರೆ ದೇಶಗಳಿಗೆ ಹೋಲಿಸಿದರೆ ಫ್ರಾನ್ಸ್ ಪರಿಸ್ಥಿತಿ ಹೆಚ್ಚು ಕಳವಳಕಾರಿಯಾಗಿದೆ. ಆದರೆ, ಮಕ್ಕಳು ಬದುಕು ಕಟ್ಟಿಕೊಳ್ಳಬೇಕಿದೆ ಎಂಬ ಉದ್ದೇಶದಿಂದ ಶಾಲೆಗಳನ್ನು ಆರಂಭಿಸಲಾಗಿದೆ. ಮಾಸ್ಕ್‌ಧಾರಿ ಮಕ್ಕಳು ತಮ್ಮ ಕಲರವದಿಂದ ಶಾಲೆಗಳಿಗೆ ಜೀವ ತುಂಬುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಕರು ಕಲಿಸುತ್ತಿರುವ ಸಂಗೀತ ಹೊಸ ಅನುಭವ ನೀಡುತ್ತಿದೆ.

ಬಾಲ್ಕನ್ ದೇಶಗಳಲ್ಲಿ ಮಾಸ್ಕ್ ಕುರಿತ ನಿಯಮಗಳನ್ನು ರೂಪಿಸಲಾಗಿದೆ. ಇನ್ನು ಕೆಲ ದೇಶಗಳು ಮಾಸ್ಕ್‌ಗಳ ಬಗ್ಗೆ ಸಡಿಲ ಧೋರಣೆ ಹೊಂದಿವೆ. ಆದರೆ, ಎಲ್ಲ ಶಾಲೆಗಳ ಶಾಲಾ ಕೋಣೆಗಳು ಹಿಂದಿಗಿಂತ ಸಾಕಷ್ಟು ಭಿನ್ನವಾಗಿವೆ. ಡೆಸ್ಕ್ ಸುತ್ತ ಪ್ಲಾಸ್ಟಿಕ್ ತಡೆ ಪರದೆ ಹಾಗೂ ವೈರಸ್ ಎಚ್ಚರಿಕೆ ಸಂದೇಶಗಳಿವೆ.

ಅಮೆರಿಕದ ಹಲವು ಜಿಲ್ಲಾ ಶಾಲೆಗಳು ಆನ್‌ಲೈನ್ ತರಗತಿ ಆರಂಭಿಸಿವೆ. ಇನ್ನು ಕೆಲ ಶಾಲೆಗಳು ಆನ್‌ಲೈನ್ ಹಾಗೂ ನೇರ ಶಿಕ್ಷಣವನ್ನು ಬೆರೆಸಿವೆ. ಯುರೋಪ್‌ನಲ್ಲಿ ಮಾತ್ರ ನೇರ ಶಾಲಾ ಶಿಕ್ಷಣ ವ್ಯಾಪಕವಾಗಿದೆ. ವೈರಸ್ ಹೊರತಾಗಿಯೂ ಜೀವನ ಸಾಮಾನ್ಯವೆಂಬ ಸಂದೇಶವನ್ನು ಯುರೋಪ್ ಸರ್ಕಾರಗಳು ನೀಡುತ್ತಿವೆ.

ಫ್ರಾನ್ಸ್ ಪ್ರಧಾನ ಮಂತ್ರಿ ಜೀನ್ ಕಾಸ್ಟೆಕ್ಸ್ ಅವರು ಮೊದಲ ದಿನ ಶಾಲಾ ಮಕ್ಕಳ ಜೊತೆ ತಾವೂ ಕುಳಿತುಕೊಂಡಿದ್ದರು. ಬ್ರಿಟನ್‌ ಶಿಕ್ಷಣ ಕಾರ್ಯದರ್ಶಿ ಗವಿನ್ ವಿಲಿಯಮ್ಸನ್ ಅವರು ಪೋಷಕರಿಗೆ ಬಹಿರಂಗ ಪತ್ರ ಬರೆದಿದ್ದು, ಮಕ್ಕಳಿಗೆ ಶಾಲೆಯೇ ಅತ್ಯುತ್ತಮ ತಾಣ. ಶಿಕ್ಷಕರು ನೇರವಾಗಿ ಮಕ್ಕಳಲ್ಲಿ ಸ್ಫೂರ್ತಿ ತುಂಬುವುದಕ್ಕಿಂತ ಪ್ರಮುಖವಾದದ್ದು ಮತ್ಯಾವುದೂ ಇಲ್ಲ ಎಂದು ಹೇಳಿದ್ದಾರೆ.

ಶಾಲೆಗಳನ್ನು ತೆರೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬ್ರಿಟನ್, ಮಕ್ಕಳನ್ನು ಕಳಿಸದ ಪೋಷಕರಿಗೆ ದಂಡ ವಿಧಿಸುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಮಕ್ಕಳು ಶಾಲೆಗೆ ಬರುವಂತಾಗಿದೆ. ಶಾಲೆಗಳಲ್ಲಿ ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳಲು ವೇಳಾಪಟ್ಟಿ ಬದಲಿಸಲಾಗಿದೆ, ತರಗತಿಯಿಂದ ತರಗತಿ ನಡುವೆ ಅಂತರ ಇಡಲಾಗಿದೆ.

ವೈರಸ್ ಅಪಾಯ ಇದೆ. ಹಾಗೆಂದು ಶಾಲೆಗಳಿಂದ ಮಕ್ಕಳನ್ನು ದೂರವಿಟ್ಟರೆ ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬೆಳವಣಿಗೆಗೆ ಹಾನಿಯಾಗುತ್ತದೆ. ವಿಶೇಷವಾಗಿ ಕಡಿಮೆ ಆದಾಯದ ಕುಟುಂಬಗಳಿಗೆ ಸಮಸ್ಯೆ ಎದುರಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ಯುರೋಪ್ ವಿಭಾಗ ತಿಳಿಸಿದೆ.

ಮಕ್ಕಳಿಂದ ವೈರಸ್ ಹರಡುವುದು ಹಲವಾರು ವಿಷಯಗಳನ್ನು ಅವಲಂಬಿಸಿದೆ ಎಂದು ಪರಿಣಿತರು ತಿಳಿಸಿದ್ದಾರೆ.

ಇಲ್ಲಿಯವರೆಗೆ ಕಂಡು ಬಂದಿರುವ ಸಾಕ್ಷಿಗಳ ಪ್ರಕಾರ ಹದಿ ಹರೆಯದವರಿಗೆ ಅಷ್ಟು ಸುಲಭವಾಗಿ ವೈರಸ್ ಹರಡುವುದಿಲ್ಲ. ಆದರೆ, ಹತ್ತು ವರ್ಷದವರೆಗಿನ ಮಕ್ಕಳು ಬೇಗನೇ ವಯಸ್ಕರಿಗೆ ಸೋಂಕು ಹರಡುತ್ತಾರೆ. ಇಷ್ಟಾದರೂ, ವೈರಸ್ ಪ್ರಭಾವ ಮಕ್ಕಳ ಮೇಲೆ ಅಷ್ಟಾಗಿ ಇಲ್ಲ. 

ಶಾಲಾರಂಭ ಅಷ್ಟು ಸುಲಭವಾಗೇನೂ ಇಲ್ಲ. ಫ್ರಾನ್ಸ್ ಉತ್ತರದಲ್ಲಿನ ಶಾಲೆಯೊಂದರ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡ ನಂತರ ಅದರ ಎಲ್ಲಾ ಮಕ್ಕಳನ್ನು ಎರಡು ವಾರ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಸರ್ಬಿಯಾದಲ್ಲಿ ಶಾಲೆಗಳ ಆರಂಭ ಕೆಲಸಕ್ಕೆ ಹೋಗುವ ಪೋಷಕರಲ್ಲಿ ಸಮಸ್ಯೆ ತಂದಿದೆ. ಇಷ್ಟಾದರೂ ಶೇ.95ರಷ್ಟು ಜನರು ಮಕ್ಕಳನ್ನು ಶಾಲೆಗಳಿಗೆ ಕಳಿಸುವುದಾಗಿ ಹೇಳಿದ್ದಾರೆ.

ಇಸ್ಟೋನಿಯಾದಲ್ಲಿ ಶಾಲೆ ಬಹುತೇಕ ಎಂದಿನಂತೆ ಆರಂಭವಾಗಿದೆ. ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಹಲವಾರು ದೇಶಗಳು ಸೆಪ್ಟೆಂಬರ್ 1ರಿಂದ ಶಾಲೆಗಳನ್ನು ಸಂಗೀತ ಗಾಯನದೊಂದಿಗೆ ಆರಂಭಿಸಿವೆ.

ಆಫ್ರಿಕಾ ಹಾಗೂ ಏಷಿಯಾದ ಹಲವಾರು ದೇಶಗಳಲ್ಲಿ ಶಾಲೆಗಳು ಮುಚ್ಚಿವೆ. ಆದರೆ, ಚೀನಾದಲ್ಲಿ ಶಾಲೆಗಳು ಪುನರಾರಂಭವಾಗಿವೆ. 

error: Content is protected !!