ದಾವಣಗೆರೆ, ಸೆ.4- ಜಿಲ್ಲೆಯಲ್ಲಿ ಶುಕ್ರವಾರ 252 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 7 ಜನರು ಸಾವನ್ನಪ್ಪಿದ್ದಾರೆ.
ಸೋಂಕು ಮುಕ್ತರಾಗಿ 125 ಜನರು ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ 2617 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 10571 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 7748 ಜನರು ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 125, ಹರಿಹರ 17, ಜಗಳೂರು 15, ಚನ್ನಗಿರಿ 46, ಹೊನ್ನಾಳಿ 40 ಹಾಗೂ ಹೊರ ಜಿಲ್ಲೆಯ 9 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ದಾವಣಗೆರೆ ವಿನೋಬನಗರದ 72 ವರ್ಷದ ವೃದ್ಧೆ, ಜಯನಗರದ 43 ಪುರುಷ, ಅಶೋಕ ನಗರದ 43 ವರ್ಷದ ಮಹಿಳೆ, ನಿಜಲಿಂಗಪ್ಪ ಬಡಾವಣೆಯ 66 ವರ್ಷದ ಪುರುಷ,
ದೊಡ್ಡಪೇಟೆಯ 62 ವರ್ಷದ ಮಹಿಳೆ, ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ನಿಟ್ಟೂರಿನ 62 ವರ್ಷದ ಪುರುಷ, ಚನ್ನಗಿರಿ ಅರೆಹಳ್ಳಿಯ 46 ವರ್ಷದ ಮಹಿಳೆ ಸೋಂಕಿನಿಂದ ಮೃತರಾಗಿದ್ದಾರೆ.
ಮಲೇಬೆನ್ನೂರು ಹೋಬಳಿಯಲ್ಲಿ 2 ದಿನಗಳಲ್ಲಿ 19 ಜನರಿಗೆ ಸೋಂಕು
ಮಲೇಬೆನ್ನೂರು : ಹೋಬಳಿಯಲ್ಲಿ ಶುಕ್ರವಾರ 6 ಜನರಿಗೆ, ಗುರುವಾರ 13 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಶುಕ್ರವಾರ ಹೊಳೆಸಿರಿಗೆರೆಯಲ್ಲಿ ಇಬ್ಬರಿಗೆ, ಕೊಮಾರನಹಳ್ಳಿಯಲ್ಲಿ ಇಬ್ಬರಿಗೆ, ಮಲೇಬೆನ್ನೂರು, ಕೆ.ಎನ್.ಹಳ್ಳಿಯಲ್ಲಿ ತಲಾ ಒಬ್ಬರಿಗೆ
ಗುರುವಾರ ಮಲೇಬೆನ್ನೂರಿನಲ್ಲಿ ಇಬ್ಬರಿಗೆ, ನಂದಿಗುಡಿಯಲ್ಲಿ ಮೂವರಿಗೆ, ಭಾಸ್ಕರ್‌ರಾವ್ ಕ್ಯಾಂಪ್‌ನಲ್ಲಿ ಇಬ್ಬರಿಗೆ, ಉಕ್ಕಡಗಾತ್ರಿಯಲ್ಲಿ ಇಬ್ಬರಿಗೆ, ಹೊಸಳ್ಳಿ, ಬಿಳಸನೂರು, ವಾಸನ, ಹರಳಹಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಉಪತಹಶೀಲ್ದಾರ್ ಆರ್.ರವಿ ತಿಳಿಸಿದ್ದಾರೆ.
ಪೌರ ಕಾರ್ಮಿಕರಿಗೆ ಟೆಸ್ಟ್ : ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಇಲ್ಲಿನ ಪುರಸಭೆಯ ಎಲ್ಲಾ ಪೌರ ಕಾರ್ಮಿಕರಿಗೆ ಶುಕ್ರವಾರ ಕೋವಿಡ್ ಟೆಸ್ಟ್ ಮಾಡಿಸಲಾಯಿತು.
ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ, ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನೌಷಾದ್ ಈ ವೇಳೆ ಹಾಜರಿದ್ದರು.