ದಾವಣಗೆರೆ, ಸೆ. 3 – ಜಿಲ್ಲೆಯಲ್ಲಿ ಗುರುವಾರ 222 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಮೂವರು ಸಾವನ್ನಪ್ಪಿದ್ದು, 139 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 10319 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 7623 ಜನರು ಸೋಂಕು ಮುಕ್ತರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2497 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 118, ಹರಿಹರ 38, ಜಗಳೂರು 10, ಚನ್ನಗಿರಿ 24, ಹೊನ್ನಾಳಿ 22 ಹಾಗೂ ಹೊರ ಜಿಲ್ಲೆಯ 10 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ಕೆಟೆಜೆ ನಗರದ 45 ವರ್ಷದ ಪುರುಷ, ಅಣಜಿ ಗ್ರಾಮದ 75ರ ವೃದ್ಧ, ಹರಿಹರದ ಕಡ್ಲೇಗೋಂದಿ 70 ವರ್ಷದ ವೃದ್ಧೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.