ಜಿಲ್ಲೆಯಲ್ಲಿ ದಶ ಸಹಸ್ರ ಕೊರೊನಾ ಸೋಂಕಿತರು

ಜಿಲ್ಲೆಯಲ್ಲಿ ದಶ ಸಹಸ್ರ ಕೊರೊನಾ ಸೋಂಕಿತರು - Janathavani

 

ಜಿಲ್ಲೆಯಲ್ಲಿ 321 ಪಾಸಿಟಿವ್,  

119 ಬಿಡುಗಡೆ  1 ಸಾವು ಸಕ್ರಿಯ 2417

ದಾವಣಗೆರೆ ಸೆ. 2-  ಜಿಲ್ಲೆಯಲ್ಲಿ ಬುಧವಾರ 321 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹರಿಹರ  ಬಿಕೆಎಂ ರಸ್ತೆಯ 70 ವರ್ಷದ ವೃದ್ಧ ಮತಪಟ್ಟಿದ್ದಾರೆ. 

119 ಜನರು ಸೋಂಕಿನಿಂದ ಗುಣ ವಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯ ವರೆಗೆ 10097 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 7484 ಜನರು ಸೋಂಕು ಮುಕ್ತರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2417 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 138, ಹರಿಹರ 58, ಜಗಳೂರು 8, ಚನ್ನಗಿರಿ 57, ಹೊನ್ನಾಳಿ 50 ಹಾಗೂ ಹೊರ ಜಿಲ್ಲೆಯ 10 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

 

error: Content is protected !!