ದಾವಣಗೆರೆ, ಆ.27- ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾದಂತೆ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆಯೇ ಸಿಗದಂತಾಗಿದೆ. ಹೀಗೆ ಅಲೆದರೂ ಸೂಕ್ತ ಚಿಕಿತ್ಸೆ ಸಿಗದೇ ನಾನ್ ಕೋವಿಡ್ ರೋಗಿ ಯೋರ್ವ ಆಂಬ್ಯುಲೆನ್ಸ್ ನಲ್ಲೇ ಕೊನೆಯುಸಿರೆಳಿ ದಿರುವ ಘಟನೆ ನಗರದಲ್ಲಿ ಇಂದು ನಡೆದಿದೆ.
ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ಹಾಲಪ್ಪ ಮೃತ ದುರ್ದೈವಿ. ಹಾಲಪ್ಪ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಸುತ್ತಿ ಕೊನೆಗೆ ಆಂಬ್ಯುಲೆನ್ಸ್ ನಲ್ಲೇ ಸಾವನ್ನಪ್ಪಿದ್ದಾರೆ.
ಹಾಲಪ್ಪನಿಗೆ ಅಸ್ತಮಾ ಇದ್ದು, ಉಸಿರಾಟದ ತೊಂದರೆ ಯಾಗಿತ್ತು. ಬೆಳಿಗ್ಗೆಯೇ ಕುಟುಂಬಸ್ಥರು ಅಂಬ್ಯುಲೆನ್ಸ್ ನಲ್ಲಿ ಕರೆತಂದು ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಸುತ್ತಿದರೂ ಚಿಕಿತ್ಸೆ ಸಿಕ್ಕಿಲ್ಲ. ಎಲ್ಲಾ ಕಡೆ ಬೆಡ್ ಇಲ್ಲ ಎನ್ನುವ ಉತ್ತರ ಕೇಳಿ ಬಂದಿದೆ. ತೀವ್ರವಾಗಿ ಆಸ್ವಸ್ಥ ಗೊಂಡಿದ್ದ ಹಾಲಪ್ಪ ಕೊನೆಗೆ ಉಸಿರಾಟದ ತೊಂದರೆ ಹೆಚ್ಚಾಗಿ ಸಾವನ್ನಪ್ಪಿದ್ದಾರೆ ನ್ನಲಾಗಿದೆ.
ಬೆಳಿಗ್ಗೆ ಯಿಂದಲೂ ಖಾಸಗಿ ಆಸ್ಪತ್ರೆಗಳನ್ನು ಅಲೆದಾಡಿದರೂ ಎಲ್ಲಿಯೂ ಬೆಡ್ ಇಲ್ಲ ಎಂದು ವಾಪಸ್ ಕಳುಹಿಸಿದರು. ಹಾಗಾಗಿ ಕೊನೆಗೆ ಜಿಲ್ಲಾಸ್ಪತ್ರೆಗೆ ಕರೆ ತಂದರೂ ವೆಂಟಿಲೇಟರ್ ಇಲ್ಲ ವೆಂದರು. ಎರಡು ತಾಸಿ ಗೂ ಅಧಿಕ ಸಮಯವಾದರೂ ಸಹ ಸ್ಪಂದಿಸಿ ಚಿಕಿತ್ಸೆ ನೀಡಲಿಲ್ಲ. ಸರಿಯಾದ ಸಮಯಕ್ಕೆ ವೆಂಟಿ ಲೇಟರ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಹಾಲಪ್ಪ ಬದುಕುತ್ತಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲದೇ ಚಿಕಿತ್ಸೆ ನೀಡದ ಆಸ್ಪತ್ರೆಗಳ ವಿರುದ್ದ ಕಿಡಿಕಾರಿದ್ದಾರೆ.
ಜಿಲ್ಲಾಧಿಕಾರಿಗಳು ಮಾತ್ರ ಚಿಕಿತ್ಸೆ ನಿರಾಕರಿಸಿದವರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಪ್ರತಿನಿತ್ಯ ಕೂಡ ಇದೇ ರೀತಿಯಾದ ತೊಂದರೆಯಾಗುತ್ತಿದ್ದು, ಕೋವಿಡ್ ರೋಗಿಗಳಿಗಿಂತ ನಾನ್ ಕೋವಿಡ್ ರೋಗಿಗಳೇ ಹೆಚ್ವು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂಬ ಅಸಮಾಧಾನ ಕೇಳಿ ಬಂದಿದೆ.