ದಾವಣಗೆರೆ, ಆ.24- ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ) ದಡಿಯಲ್ಲಿ ಬರುವ ಜಿಲ್ಲೆಯ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಹೊಸದಾಗಿ ದಾಖಲಾಗುವ ಮಕ್ಕಳನ್ನು ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಪ್ರತ್ಯೇಕವಾಗಿ ಇರಿಸಲು ಬಾಲಕರಿ ಗಾಗಿ ಡಾನ್ ಬಾಸ್ಕೋ ಚಾರಿಟಬಲ್ ಸೊಸೈಟಿ ಹಾಗೂ ಬಾಲಕಿಯರಿಗಾಗಿ ಅಡೋರರ್ಸ್ ವುಮೆನ್ಸ್ ಚಾರಿಟ ಬಲ್ ಸೊಸೈಟಿ (ದಾವಣಗೆರೆ) ಈ ಸಂಸ್ಥೆಗಳಲ್ಲಿ ಪ್ರತ್ಯೇಕ ಕೊಠಡಿಯನ್ನು ನಿಗದಿಪಡಿಸಿ ಜಿಲ್ಲಾಧಿಕಾರಿಯವರು ಅನುಮೋದನೆ ಹಾಗೂ ಆದೇಶ ನೀಡಿರುತ್ತಾರೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
December 24, 2024