ದಾವಣಗೆರೆ, ಆ. 20 – ನಾಡಿದ್ದು ದಿನಾಂಕ 22ರ ಶನಿವಾರ ನಡೆಯಲಿರುವ ಶ್ರೀ ಗಣೇಶ ಚತುರ್ಥಿ ಸಂದರ್ಭದಲ್ಲಿನ ತಮ್ಮ ಹುಟ್ಟುಹಬ್ಬಕ್ಕೆ ಹಿತೈಷಿಗಳು, ಅಭಿಮಾನಿಗಳು ಇದ್ದಲ್ಲಿಯೇ ಇದ್ದು ತಮ್ಮನ್ನು ಹಾರೈಸುವಂತೆ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ವೈರಸ್ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಯಾರೂ ತಮ್ಮನ್ನು ಮುಖತಃ ಭೇಟಿಯಾಗದೇ ತಮ್ಮನ್ನು ಹರಸುವಂತೆ ಗಣೇಶ್ ಅವರು ಪತ್ರಿಕಾ ಹೇಳಿಕೆಯಲ್ಲಿ ಕೇಳಿಕೊಂಡಿದ್ದಾರೆ.